ಕ್ರಿಕೆಟ್ ಜನಪ್ರಿಯ ಕ್ರೀಡೆಗಳಲ್ಲೊಂದು. ಅದರಲ್ಲೂ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಂಥಾ ದೇಶಗಳಲ್ಲಿ ಹೆಚ್ಚು ಫೇಮಸ್.
ಮಹಿಳಾ ಕ್ರಿಕೆಟಿಗರು ಕೂಡಾ ಪುರುಷ ಕ್ರಿಕೆಟಿಗರಂತೆ ಜನಪ್ರಿಯರು. ಅಲ್ಲದೆ ಸಂಪಾದನೆಯೂ ದೊಡ್ಡ ಮೊತ್ತದಲ್ಲಿರುತ್ತದೆ.
ಇಂದು ವಿಶ್ವದ ಟಾಪ್ 5 ಶ್ರೀಮಂತ ಮಹಿಳಾ ಕ್ರಿಕೆಟಿಗರು ಯಾರು ಎಂಬುದನ್ನು ನೋಡೋಣ. ಮಾಧ್ಯಮ ವರದಿಗಳನ್ನು ಆಧರಿಸಿದ ಮಾಹಿತಿ ಇದು.
ಎಲಿಸ್ ಪೆರ್ರಿ: ಆಸ್ಟ್ರೇಲಿಯಾ ಹಾಗೂ ಆರ್‌ಸಿಬಿ ಆಟಗಾರ್ತಿ ಪೆರ್ರಿ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 121 ಕೋಟಿ ರೂಪಾಯಿ. ಇವರ ಫಿಫಾ ವಿಶ್ವಕಪ್ ಮತ್ತು ಕ್ರಿಕೆಟ್ ವಿಶ್ವಕಪ್ ಎರಡರಲ್ಲೂ ಆಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರ ಒಟ್ಟು ಆಸ್ತಿ ಮೌಲ್ಯ 75 ಕೋಟಿ ರೂಪಾಯಿ. ಇವರು ಆಸೀಸ್ ತಂಡದ ಯಶಸ್ವಿ ನಾಯಕಿ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಒಟ್ಟು ಆಸ್ತಿ ಮೌಲ್ಯ 42 ಕೋಟಿ ರೂಪಾಯಿ.
ಭಾರತೀಯ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ನಿವ್ವಳ ಮೌಲ್ಯ ಸುಮಾರು 34 ಕೋಟಿ ರೂಪಾಯಿ.
ಭಾರತೀಯ ವನಿತೆಯರ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 26 ಕೋಟಿ ರೂ.