ಎಂಸಿಜಿಯಲ್ಲಿ ಟಾಪ್‌ 5 ಯಶಸ್ವಿ ರನ್ ಚೇಸ್‌ಗಳಿವು

By Jayaraj
Dec 29, 2024

Hindustan Times
Kannada

ಎಂಸಿಜಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ ರೋಚಕ ಹಂತಕ್ಕೆ ಬಂದಿದೆ. ಅಂತಿಮ ದಿನದಾಟ ಬಾಕಿಯಿದ್ದು, ಭಾರತದ ಗೆಲುವಿಗೆ ಸವಾಲಿನ ಮೊತ್ತ ಸಿಗಲಿದೆ.

ಭಾರತದ ಗೆಲುವಿಗೆ ಕನಿಷ್ಠ 334 ರನ್‌ ಗುರಿ ಸಿಗುವುದಂತೂ ಸ್ಪಷ್ಟ. ಆದರೆ, ಕೊನೆಯ ಒಂದು ದಿನದೊಳಗೆ ಈ ಗುರಿಯನ್ನು ಭಾರತ ತಲುಪುತ್ತಾ ಎಂಬ ಪ್ರಶ್ನೆ ಇದೆ.

MCGಯಲ್ಲಿ ಈ ಹಿಂದೆ ಕೆಲವು ಪಂದ್ಯಗಳಲ್ಲಿ ಯಶಸ್ವಿ ಚೇಸಿಂಗ್‌ ನಡೆದಿವೆ. ಇಂಗ್ಲೆಂಡ್‌ ತಂಡ ಇದರಲ್ಲಿ ಅಗ್ರ ಸ್ಥಾನ ಪಡೆದಿದೆ.

ಹಾಗಿದ್ದರೆ, ಎಂಸಿಜಿಯ ಟಾಪ್‌ 5 ಯಶಸ್ವಿ ರನ್‌ ಚೇಸಿಂಗ್‌ ಯಾವುವು ಮತ್ತು ಯಾವ ತಂಡದ್ದು ಎಂಬುದನ್ನು ನೋಡೋಣ.

1928ರಲ್ಲಿ 332 ರನ್ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಹೆಚ್ಚು ರನ್‌ ಯಶಸ್ವಿ ಚೇಸ್ ಮಾಡಿದ ದಾಖಲೆ ಹೊಂದಿದೆ.

1895ರ ಮಾರ್ಚ್ 1ರಲ್ಲಿ 297 ರನ್‌ ಚೇಸ್‌ ಮಾಡಿದ ಇಂಗ್ಲೆಂಡ್ ತಂಡ 298/4 ರನ್ ತಲುಪಿತು.

1953ರ ಫೆಬ್ರವರಿ 6ರಂದು‌ 295 ರನ್‌ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 297/4 ರನ್‌ ಗಳಿಸಿ ಗೆದ್ದಿತು.

1929ರ ಮಾರ್ಚ್ 8ರಂದು 286 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 287/5 ರನ್‌ ಗಳಿಸಿತು.

1908ರ ಜನವರಿ 1ರಂದು 282 ರನ್‌ಗಳ ಚೇಸಿಂಗ್‌ ಮಾಡಿದ ಇಂಗ್ಲೆಂಡ್, 282/9 ರನ್‌ ಗಳಿಸಿತು.

All Photo: PTI/AP

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ