ರಣಜಿ ಟ್ರೋಫಿ: ಮುಂಬೈ, ವಿದರ್ಭ, ಗುಜರಾತ್ ಸೆಮೀಸ್ಗೆ ಲಗ್ಗೆ
By Prasanna Kumar PN Feb 11, 2025
Hindustan Times Kannada
2024-25ನೇ ಸಾಲಿನ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ, ವಿದರ್ಭ, ಗುಜರಾತ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು 152 ರನ್ಗಳಿಂದ ಮಣಿಸಿ ನಾಲ್ಕರ ಘಟಕ್ಕೆ ಏರಿದೆ.
ನಾಗ್ಪುರ ವಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 198 ರನ್ಗಳ ಭರ್ಜರಿ ಗೆಲುವು ಸಾಧಿಸಿದ ವಿದರ್ಭ ಉಪಾಂತ್ಯಕ್ಕೇರಿದೆ.
ರಾಜ್ಕೋಟ್ನಲ್ಲಿ ಜರುಗಿದ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್ ಮತ್ತು 98 ರನ್ಗಳಿಂದ ಗೆದ್ದ ಗುಜರಾತ್ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲ ಕ್ವಾರ್ಟರ್ ಫೈನಲ್ ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳ ನಡುವೆ ನಡೆಯುತ್ತಿದ್ದು, ಅಂತಿಮ ದಿನವಾದ ಫೆ 12ರಂದು ಫಲಿತಾಂಶ ಬರಲಿದೆ. ಕೇರಳ ಗೆಲ್ಲಲು 299 ರನ್ಗಳ ಅಗತ್ಯ ಇದೆ.
ನಾಲ್ಕರ ಘಟಕ್ಕೇರಿರುವ ಮುಂಬೈ ಮತ್ತು ವಿದರ್ಭ ತಂಡಗಳು ಎರಡನೇ ಸೆಮಿಫೈನಲ್ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಫೆಬ್ರವರಿ 17 ರಿಂದ 21ರ ತನಕ ನಡೆಯಲಿದೆ.
ಮೊದಲನೇ ಸೆಮಿಫೈನಲ್ ಗುಜರಾತ್ ಮತ್ತು ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ ಜಮ್ಮು ಕಾಶ್ಮೀರ ಅಥವಾ ಕೇರಳ ತಂಡದ ವಿರುದ್ಧ ಸೆಣಸಾಟ ನಡೆಸಲಿವೆ. ಈ ಪಂದ್ಯವು ಫೆಬ್ರವರಿ 17 ರಿಂದ 21ರ ತನಕ ನಡೆಯಲಿದೆ.