2024-25ರ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ವಿದರ್ಭ ತಂಡವನ್ನು 36 ರನ್ಗಳಿಂದ ಸೋಲಿಸಿದ ಕರ್ನಾಟಕ ತಂಡ 5 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಧಿಕ ಪ್ರಶಸ್ತಿ ಗೆದ್ದ ಎಂಬ ದಾಖಲೆಗೆ ಕರ್ನಾಟಕ ತಂಡ ಪಾತ್ರವಾಗಿದೆ. ಆದರೆ ವಿದರ್ಭ ತಂಡದ ಚೊಚ್ಚಲ ಟ್ರೋಫಿ ಕನಸು ಭಗ್ನವಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಪೇರಿಸಿತು. ಸ್ಮರಣ್ ರವಿಚಂದ್ರನ್ ಶತಕ (101), ಅಭಿನವ್ ಮನೋಹರ್ (79), ಕೃಷ್ಣನ್ ಶ್ರೀಜಿತ್ (78) ತಲಾ ಅರ್ಧಶತಕ ಸಿಡಿಸಿದರು.
ಈ ಗುರಿ ಬೆನ್ನಟ್ಟಿದ ವಿದರ್ಭ 48.2 ಓವರ್ಗಳಲ್ಲಿ 312 ರನ್ಗಳಿಗೆ ಆಲೌಟ್ ಆಯಿತು. ಧ್ರುವ್ ಶೋರೆ ಶತಕ ಸಿಡಿಸಿದ ಹೊರತಾಗಿಯೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ರನ್ನರ್ಅಪ್ಗೆ ತೃಪ್ತಿಯಾಯಿತು.
ಹಾಗಾದರೆ ವಿಜಯ್ ಹಜಾರೆ ಟ್ರೋಫಿ ಗೆದ್ದಿರುವ ಕರ್ನಾಟಕ ಮತ್ತು ರನ್ನರ್ಅಪ್ ವಿದರ್ಭ ತಂಡಕ್ಕೆ ಸಿಕ್ಕಿರುವ ಬಹುಮಾನ ಮೊತ್ತವೆಷ್ಟು? ಇಲ್ಲಿದೆ ವಿವರ.
ಚಾಂಪಿಯನ್ ಪಟ್ಟಕೇರಿದ ಕರ್ನಾಟಕ ತಂಡಕ್ಕೆ ಸಿಕ್ಕಿರುವ ಬಹುಮಾನ ಮೊತ್ತ 1 ಕೋಟಿ ರೂಪಾಯಿ.
ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ವಿದರ್ಭ ತಂಡಕ್ಕೆ ಸಿಕ್ಕಿರುವ ಬಹುಮಾನ ಮೊತ್ತ 50 ಲಕ್ಷ ರೂಪಾಯಿ.
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು