ರೋಹಿತ್ vs ಕೊಹ್ಲಿ; ಟೆಸ್ಟ್ ದಾಖಲೆಗಳ ಹೋಲಿಕೆ
By Prasanna Kumar P N
Jan 03, 2025
Hindustan Times
Kannada
ಭಾರತದ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರ ನಡುವಿನ ಟೆಸ್ಟ್ ವೃತ್ತಿಜೀವನದ ಸಾಮ್ಯತೆ ಹೇಗಿದೆ?
ವಿರಾಟ್ ಕೊಹ್ಲಿ 122 ಟೆಸ್ಟ್ ಪಂದ್ಯಗಳ 209 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದು 9224 ರನ್ ಸಿಡಿಸಿದ್ದಾರೆ.
47.21ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿರುವ ಕೊಹ್ಲಿ, 30 ಶತಕ (7 ದ್ವಿಶತಕ ಸೇರಿ), 31 ಅರ್ಧಶತಕ ಸಿಡಿಸಿದ್ದಾರೆ.
ವಿರಾಟ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 254. ಟೆಸ್ಟ್ನಲ್ಲಿ 1026 ಬೌಂಡರಿ, 30 ಸಿಕ್ಸರ್ ಬಾರಿಸಿದ್ದಾರೆ.
ಈವರೆಗೂ ಟೆಸ್ಟ್ನಲ್ಲಿ 16596 ಎಸೆತಗಳನ್ನು ಎದುರಿಸಿದ್ದು, 55.58ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. (ಈ ಅಂಕಿ-ಅಂಶ ಸಿಡ್ನಿ ಟೆಸ್ಟ್ನ ಮೊದಲ ಇನ್ನಿಂಗ್ಸ್ ತನಕ)
ರೋಹಿತ್ ಶರ್ಮಾ 67 ಟೆಸ್ಟ್ ಪಂದ್ಯಗಳ 116 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದು 4302 ರನ್ ಗಳಿಸಿದ್ದಾರೆ.
40.58ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಹಿಟ್ಮ್ಯಾನ್, 12 ಶತಕ (1 ದ್ವಿಶತಕ ಸೇರಿ), 18 ಅರ್ಧಶತಕ ಸಿಡಿಸಿದ್ದಾರೆ.
ರೋಹಿತ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 212. ಟೆಸ್ಟ್ನಲ್ಲಿ 473 ಬೌಂಡರಿ, 88 ಸಿಕ್ಸರ್ ಸಿಡಿಸಿದ್ದಾರೆ.
ಟೆಸ್ಟ್ನಲ್ಲಿ 7538 ಎಸೆತಗಳನ್ನು ಎದುರಿಸಿದ್ದು, 57.07ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಮಧುಮೇಹಿಗಳು ಖರ್ಜೂರ ತಿನ್ನಬಹುದೇ, ಇಲ್ಲಿದೆ ಮಾಹಿತಿ
Photo: Pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ