ಆರ್ಸಿಬಿ ಪ್ಲೇಆಫ್ ಅವಕಾಶಗಳು ಎಷ್ಟಿದೆ?
By Prasanna Kumar P N
Feb 28, 2025
Hindustan Times
Kannada
ಡಬ್ಲ್ಯುಪಿಎಲ್ 2025 ರೋಚಕ ಘಟ್ಟ ತಲುಪುತ್ತಿದೆ. ಯಾವ ತಂಡವು ಪ್ಲೇಆಫ್ ಪ್ರವೇಶಿಸುತ್ತದೆ ಎಂಬುದನ್ನು ಅಂದಾಜಿಸಲು ಕಷ್ಟವಾಗ್ತಿದೆ.
ಹೀಗಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆ. ಒಂದು ಪಂದ್ಯ ಸೋತರೂ ಲೀಗ್ನಿಂದಲೇ ಹೊರ ಬೀಳುವ ಭೀತಿಗೆ ಸಿಲುಕಿದೆ.
ಹಾಗಾದರೆ ಆರ್ಸಿಬಿ ಪ್ಲೇಆಫ್ ಹಾದಿ ಹೇಗಿದೆ? ಇಲ್ಲಿದೆ ವಿವರ.
ಪ್ರಸ್ತುತ ಆರ್ಸಿಬಿ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ +0.155 ನೆಟ್ ರನ್ ರೇಟ್ನೊಂದಿಗೆ 3ನೇ ಸ್ಥಾನದಲ್ಲಿದೆ.
ವಡೋದರಾ ಹಂತದಲ್ಲಿ ಸತತ ಎರಡು ಪಂದ್ಯ ಗೆದ್ದಿದ್ದ ಆರ್ಸಿಬಿ, ತಮ್ಮ ತವರು ಮೈದಾನ ಬೆಂಗಳೂರಿನಲ್ಲಿ ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ.
ಇನ್ನು ಮೂರು ಪಂದ್ಯಗಳು ಮಾತ್ರ ಉಳಿದಿದ್ದು, ಮುಂಬೈ, ಡೆಲ್ಲಿ, ಯುಪಿ ವಾರಿಯರ್ಸ್ ವಿರುದ್ಧ ಸೆಣಸಲಿದೆ. ಇವು ಗೆದ್ದರೆ 10 ಅಂಕ ಪಡೆದು ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ.
ಮುಂಬೈ, ಡೆಲ್ಲಿ ಆಡಲಿರುವ ಮುಂದಿನ ಪಂದ್ಯಗಳ ಫಲಿತಾಂಶ ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ. ಒಂದು ಪಂದ್ಯ ಸೋತರೂ ಆರ್ಸಿಬಿ ಪ್ಲೇಆಫ್ ಹಾದಿ ಕಷ್ಟವಾಗಲಿದೆ.
ಯುಪಿ, ಜಿಜಿ ತಂಡಗಳು ಸಹ ಇಷ್ಟೇ ಪಂದ್ಯಗಳು ಗೆದ್ದು 4, 5ನೇ ಸ್ಥಾನದಲ್ಲಿವೆ. ಉಳಿದ ಪಂದ್ಯಗಳಲ್ಲಿ ಗೆದ್ದರೆ ಈ ತಂಡಗಳು ಪ್ಲೇಆಫ್ ಪ್ರವೇಶಿಸಲಿವೆ.
ಮತ್ತೊಂದೆಡೆ ಆರ್ಸಿಬಿ ಅಗ್ರಸ್ಥಾನ ಅಲ್ಲದಿದ್ದರೂ 2 ಅಥವಾ 3 ಸ್ಥಾನವನ್ನಾದರೂ ಖಚಿತಪಡಿಸಿಕೊಳ್ಳಲು ಉಳಿದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವುದು ಅಗತ್ಯ.
ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ