ಪಾಕಿಸ್ತಾನ ನಾಯಕ ಬಾಬರ್‌ ಅಜಮ್‌ ವಿದ್ಯಾರ್ಹತೆ ಎಷ್ಟು?

By Jayaraj
Jun 09, 2024

Hindustan Times
Kannada

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಮೈದಾನದಲ್ಲಿ ಬ್ಯಾಟ್‌ ಹಿಡಿದು ಅಬ್ಬರಿಸುವ ಬಾಬರ್ ಅವರ ಶೈಕ್ಷಣಿಕ ಹಿನ್ನಲೆ ಏನು ಎಂಬುದನ್ನು ತಿಳಿಯೋಣ.

ಮಾಧ್ಯಮ ವರದಿಗಳ ಪ್ರಕಾರ, ಬಾಬರ್ ಅಜಮ್ ಶಾಲಾ ಶಿಕ್ಷಣವನ್ನು ದಿ ಲಾರ್ಡ್ಸ್ ಇಂಟರ್ನ್ಯಾಷನಲ್ ಸ್ಕೂಲ್‌ನಿಂದ ಪಡೆದಿದ್ದಾರೆ.

ಬಾಲ್ಯದಿಂದಲೂ, ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದ ಬಾಬರ್‌, ಅಧ್ಯಯನದ ಸಮಯದಲ್ಲಿಯೂ ಕ್ರಿಕೆಟ್‌ನತ್ತ ಸಂಪೂರ್ಣ ಒಲವು ತೋರಿದ್ದರು.

ಬಾಬರ್ ಅಜಮ್ ಪದವಿ ಪೂರ್ಣಗೊಳಿಸಿದ್ದಾರೆ. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.

ಕೆಲವು ಮೂಲಗಳ ಪ್ರಕಾರ, ಬಾಬರ್‌ ಕೇವಲ 8ನೇ ತರಗತಿಯವರೆಗೆ ಓದಿದ್ದಾರೆ ಎಂಬ ಮಾಹಿತಿ ಇವೆ.

ಬಾಬರ್‌ ಇಲ್ಲಿಯವರೆಗೆ ಒಟ್ಟು 52 ಟೆಸ್ಟ್, 117 ಏಕದಿನ ಹಾಗೂ 120 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

ಟೆಸ್ಟ್‌ನಲ್ಲಿ 3898 ರನ್‌, ಏಕದಿನ ಸ್ವರೂಪದಲ್ಲಿ 56.72ರ ಸರಾಸರಿಯಲ್ಲಿ 5729 ರನ್ ಹಾಗೂ ಟಿ20ಯಲ್ಲಿ 4067 ರನ್‌ ಗಳಿಸಿದ್ದಾರೆ

ನೋಡೋಕೆ ಸಖತ್ ಕಣ್ರಿ ಅಮೀರ್-ಇಮಾದ್ ಪತ್ನೀರು