ಜಯ್ ಶಾ ಸ್ಥಾನ ತುಂಬಿದ ದೇವಜಿತ್ ಸೈಕಿಯಾ ಯಾರು?

By Prasanna Kumar P N
Jan 13, 2025

Hindustan Times
Kannada

ಜಯ್ ಶಾ ಅವರಿಂದ ತೆರವಾಗಿದ್ದ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ದೇವಜಿತ್ ಸೈಕಿಯಾ ಅವರು ನೇಮಕಗೊಂಡಿದ್ದಾರೆ. ಜಯ್​ ಶಾ ಐಸಿಸಿ ಅಧ್ಯಕ್ಷರಾದ ಕಾರಣ ಈ ಹುದ್ದೆ ತೆರವಾಗಿತ್ತು.

ಜನವರಿ 12ರ ಭಾನುವಾರ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ದೇವಜಿತ್ ಸೈಕಿಯಾ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ಖಜಾಂಚಿ ಸ್ಥಾನಕ್ಕೆ ಪ್ರಭುತೇಜ್ ಸಿಂಗ್ ಭಾಟಿಯಾ ನೇಮಕವಾದರು.

ಡಿ​ಸೆಂಬರ್ 1ರಂದು ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ನಂತರ ಸೈಕಿಯಾ ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಸಂಪೂರ್ಣ ಜವಾಬ್ದಾರಿ ಸಿಕ್ಕಿದೆ.

ಅಸ್ಸಾಂನ ದೇವಜಿತ್ ಸೈಕಿಯಾ ಅವರು ಸುದೀರ್ಘ ಕ್ರಿಕೆಟ್ ವೃತ್ತಿಜೀವನ ಹೊಂದಿಲ್ಲ. ವಿಕೆಟ್-ಕೀಪರ್-ಬ್ಯಾಟರ್​ ಆಗಿದ್ದ ಅವರು 1990-1991ರ ನಡುವೆ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಸೈಕಿಯಾ 8.83ರ ಬ್ಯಾಟಿಂಗ್ ಸರಾಸರಿಯಲ್ಲಿ 53 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 24. ಈ ವೇಳೆ ಅವರು 8 ಕ್ಯಾಚ್‌ಗಳು ಮತ್ತು ಒಂದು ಸ್ಟಂಪಿಂಗ್ ಮಾಡಿದ್ದಾರೆ.

55 ವರ್ಷದ ಸೈಕಿಯಾ ವೃತ್ತಿಯಲ್ಲಿ ವಕೀಲರು. ಅವರಿಗೆ ಆಡಳಿತದ ಅನುಭವವೂ ಇದೆ. ಅವರು ಪ್ರಸ್ತುತ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದ ಕ್ರಿಕೆಟ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಸೈಕಿಯಾ ಅವರು ಬಿಸ್ವಾ ಶರ್ಮಾ ಅವರೊಂದಿಗೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಕೆಲಸ ಮಾಡಿದ್ದಾರೆ. 2016ರಲ್ಲಿ ಸೈಕಿಯಾ ಎಸಿಎ ಉಪಾಧ್ಯಕ್ಷರಾದರು.

2019ರಲ್ಲಿ ಎಸಿಎ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವರು, 2022ರಲ್ಲಿ ಬಿಸಿಸಿಐಗೆ ಸೇರ್ಪಡೆಗೊಂಡರು ಮತ್ತು ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಸಿಎಂ ಅಧಿಕಾರ ವಹಿಸಿಕೊಂಡ ನಂತರ ಸೈಕಿಯಾ ಅವರನ್ನು ಅಸ್ಸಾಂನ ಅಡ್ವೊಕೇಟ್ ಜನರಲ್ ಮತ್ತು ಸರ್ಕಾರದ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಿಸಲಾಯಿತು.

21 ಮೇ 2021ರಂದು ಅಸ್ಸಾಂನ ಅಡ್ವೊಕೇಟ್ ಜನರಲ್ ಆದರು. ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಮರು ಚುನಾವಣೆ ನಡೆದು ಜನವರಿ 12ರಂದುಅವಿರೋಧವಾಗಿ ಆಯ್ಕೆಯಾದರು.

All Photos: Devajit Saikia instagram

ಭಾರತದಲ್ಲಿ ತೋಟಗಾರಿಕೆ ಬೆಳೆಗಳ ಬಂಪರ್‌