ಚಹಲ್ ಪತ್ನಿ ಧನಶ್ರೀ ವರ್ಮಾ ಯಾರು?
By Jayaraj
Jan 04, 2025
Hindustan Times
Kannada
ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಡಿವೋರ್ಸ್ ವದಂತಿ ಹಬ್ಬಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್‌ಫಾಲೊ ಮಾಡಿದ್ದಾರೆ. ಚಹಲ್ ಪತ್ನಿ ಜೊತೆಗಿನ ಫೋಟೋಸ್ ಡಿಲೀಟ್ ಮಾಡಿದ್ದಾರೆ.
ಧನಶ್ರೀ ಮತ್ತು ಚಹಲ್ ಪ್ರೀತಿಸಿ ಮದುವೆಯಾದವರು. 2020ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಧನಶ್ರೀ 1996ರ ಸೆಪ್ಟೆಂಬರ್ 27ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಜನಿಸಿದರು.
ಧನಶ್ರೀ ವರ್ಮಾ ವೃತ್ತಿಯಲ್ಲಿ ದಂತ ವೈದ್ಯೆ. ಅವರು 2014ರಲ್ಲಿ ಮುಂಬೈನ ಡಿವೈ ಪಾಟೀಲ್ ಕಾಲೇಜಿನಲ್ಲಿ ಡೆಂಟಿಸ್ಟ್ರಿ ಓದಿದ್ದಾರೆ.
ಧನಶ್ರೀಗೆ ನೃತ್ಯದ ಬಗ್ಗೆ ಅಪಾರ ಆಸಕ್ತಿ. ಹೀಗಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿ ತಮ್ಮ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದರು.
ಈವರಿಗೆ 25 ಲಕ್ಷಕ್ಕೂ ಹೆಚ್ಚು ಫಾಲೊವರ್ಸ್ ಇದ್ದಾರೆ. ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ.
ತಮ್ಮ ಚಾನೆಲ್, ಸಾಮಾಜಿಕ ಮಾಧ್ಯಮ, ಬ್ರ್ಯಾಂಡ್ ಒಪ್ಪಂದ ಮತ್ತು ನೃತ್ಯ ಸಂಯೋಜನೆ ಮೂಲಕ ಭಾರಿ ಸಂಪಾದನೆ ಮಾಡುತ್ತಾರೆ. ಧನಶ್ರೀ ಅಂದಾಜು ನಿವ್ವಳ ಮೌಲ್ಯ 24 ಕೋಟಿ ರೂ.
ಧನಶ್ರೀ ಡಾನ್ಸ್ ವಿಡಿಯೋ ನೋಡಿ ಡ್ಯಾನ್ಸ್ ಕಲಿಯಬೇಕು ಎಂಬ ಆಸೆ ಚಹಾಲ್‌ಗೆ ಹುಟ್ಟಿತ್ತಂತೆ. ಅವರಿಗೆ ಮೆಸೇಜ್ ಮಾಡಿ ಹೇಳಿದ್ದರಂತೆ.
ಇದಕ್ಕೆ ಒಪ್ಪಿದ್ದ ಧನಶ್ರೀ ಆನ್‌ಲೈನ್ ಕ್ಲಾಸ್ ಆರಂಭಿಸಿದ್ದರು. ಆ ಸಮಯದಲ್ಲಿ ಚಹಲ್ ಪ್ರಪೋಸ್ ಮಾಡಿದಾಗ ಧನಶ್ರೀ ಒಪ್ಪಿದ್ದರಂತೆ.
ಹಾಟ್ ಚಾಕೊಲೆಟ್ ಡ್ರಿಂಕ್ ರೆಸಿಪಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ