ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ರಾಘವಿ ಬಿಸ್ಟ್ ಹೆಸರು ಭಾರಿ ಸದ್ದು ಮಾಡುತ್ತಿದೆ.
ತನ್ನ ಚೊಚ್ಚಲ ಪಂದ್ಯದಲ್ಲಿ ನಿರಾಸೆ ಮೂಡಿಸಿದರೂ 3ನೇ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರಾಘವಿ ಬಿಸ್ಟ್, 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 31 ರನ್ ನೀಡಿದರು.
ಬ್ಯಾಟಿಂಗ್ ಶೈಲಿ, ಶಾಟ್ ಸೆಲೆಕ್ಷನ್, ಫುಟ್ ವರ್ಕ್ ಅದ್ಭುತವಾಗಿತ್ತು. ಇದರೊಂದಿಗೆ ತನ್ನ ಸಾಮರ್ಥ್ಯ ಎಂತಹದ್ದು ಎಂಬುದು ನಿರೂಪಿಸುತ್ತದೆ.
ದೇಶೀಯ ಮತ್ತು ಎ ತಂಡ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬಿಸ್ಟ್, ಉತ್ತರಾಖಂಡದ ತೆಹ್ರಿ ಜಿಲ್ಲೆಯ ಚಂಗೋರಾ ಗ್ರಾಮದವರು.
ಆಕೆಯ ತಂದೆ-ತಾಯಿ ಇಬ್ಬರೂ ವ್ಯಾಪಾರ ಮಾಲೀಕರು. ಅಲ್ಲದೆ ಇಬ್ಬರು ಜಪಾನ್‌ನಲ್ಲಿ ವಾಸಿಸುತ್ತಿದ್ದಾರೆ.
ರಾಘವಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಭಾರತ ಎ ಮಹಿಳಾ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳಲ್ಲಿ 205 ರನ್ ಗಳಿಸಿದ್ದರು.
ಉತ್ತರಾಖಂಡ ತಂಡಕ್ಕೆ ಆಧಾರ ಸ್ತಂಭವಾಗಿರುವ ಅವರು, 2024/25 ಋತುವಿನಲ್ಲಿ ಈಗಾಗಲೇ 3 ಅರ್ಧಶತಕ ಸಹಿತ 35.55 ಸರಾಸರಿಯಲ್ಲಿ 320 ರನ್ ಗಳಿಸಿದ್ದಾರೆ.
ಬಲಗೈ ಮಧ್ಯಮ ವೇಗದ ಬೌಲರ್ ಕೂಡ ಆಗಿರುವ ಅವರು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಬೌಲಿಂಗ್ ಸರಾಸರಿ 30.5 ಹೊಂದಿದ್ದಾರೆ. T20 ಕ್ರಿಕೆಟ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅವರು 2025ರ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಮಿನಿ-ಹರಾಜಿನಲ್ಲಿ ಆರ್ಸಿಬಿ ತಂಡಕ್ಕೆ ಸೇಲ್ ಆಗಿದ್ದಾರೆ. ಇವರು ರೋಹಿತ್ ಶರ್ಮಾ ಅಭಿಮಾನಿ.