ಬ್ಯಾಟಿಂಗ್ ವೇಳೆ ಕ್ರಿಕೆಟಿಗರು ಚ್ಯೂಯಿಂಗ್ ಗಮ್ ಅಗಿಯುವುದು ಯಾಕೆ?
By Jayaraj
Apr 27, 2025
Hindustan Times
Kannada
ಕ್ರಿಕೆಟ್ ಪಂದ್ಯ ನಡೆಯುವಾಗ ಕೆಲವು ಕ್ರಿಕೆಟಿಗರು ಬಾಯಿಯಲ್ಲಿ ಚ್ಯೂಯಿಂಗ್ ಗಮ್ ಹಾಕಿಕೊಂಡು ಅಗಿಯುತ್ತಿರುತ್ತಾರೆ.
ಇನ್ನೂ ಕೆಲವು ಕ್ರಿಕೆಟಿರು ಬ್ಯಾಟಿಂಗ್ ಮಾಡುವಾಗಲೂ ಚ್ಯೂಯಿಂಗ್ ಗಮ್ ಅಗಿಯುತ್ತಾ ಇರುತ್ತಾರೆ.
ಇದಕ್ಕೆ ಕೆಲವು ಕಾರಣಗಳೂ ಇವೆ. ಕೆಲವೊಬ್ಬರು ತಮಗೆ ಅಭ್ಯಾಸ ಎಂಬಂತೆ ಅಗಿಯುತ್ತಾರೆ. ಆದರೆ ಹೆಚ್ಚಿನ ಆಟಗಾರರ ಹಿಂದಿನ ಕಾರಣ ಬೇರೆ ಇವೆ.
ಆಡುವಾಗ ಗಮನ ಕೇಂದ್ರೀಕರಿಸಲು, ತಮ್ಮ ಏಕಾಗ್ರತೆ ಸುಧಾರಿಸಲು ಈ ಟ್ರಿಕ್ಸ್ ಅನುಸರಿಸುತ್ತಾರೆ.
ಚೂಯಿಂಗ್ ಗಮ್ ಬಾಯಿಯ ಜೊಲ್ಲು ಉತ್ಪಾದನೆ ಹೆಚ್ಚಿಸುತ್ತದೆ. ಇದು ಬಾಯಿಯನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ
ಕೆಲವು ಆಟಗಾರರು ಚೂಯಿಂಗ್ ಗಮ್ ಅನ್ನು ತಮ್ಮ ಕಾರ್ಯಕ್ಷಮತೆ ವೃದ್ಧಿಸಲು ಬಳಸುತ್ತಾರೆ. ಆಟದ ಮೇಲೆ ನಿಯಂತ್ರಣ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಟಗಾರರು ಪಂದ್ಯದ ತೀವ್ರ ಒತ್ತಡದ ಸಮಯದಲ್ಲಿ ಹೆಚ್ಚು ನಿರಾಳವಾಗಿ ಆಡಲು ಈ ವಿಧಾನ ಸಹಾಯ ಮಾಡುತ್ತದೆ.
ಕೆಲವೊಮ್ಮೆ ದೊಡ್ಡ ಗುರಿ ಚೇಸ್ ಮಾಡಬೇಕಾಗುತ್ತದೆ. ಆಗ ಆಟಗಾರನ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಇಂಥಾ ಸಮಯದಲ್ಲಿ ಒತ್ತಡ ಕೆಡಿಮೆ ಮಾಡಿ ನಿರಾಳರಾಗಿ ಆಡಲು, ಆಟಗಾರರು ತಮ್ಮ ಬಾಯಿಗೆ ಕೆಲಸ ಕೊಡುತ್ತಾರೆ.
AP(File)
ಸಂವಹನ ಕೌಶಲ್ಯ ಸುಧಾರಿಸಲು ಈ 5 ಅಪ್ಲಿಕೇಶನ್ ನಿಮಗೆ ನೆರವಾಗುತ್ತೆ
pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ