ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಮೊಹಮ್ಮದ್ ಶಮಿ ಅವಕಾಶ ಪಡೆಯದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಮತ್ತೊಂದೆಡೆ ಬಿಸಿಸಿಐ ಶಮಿಗೆ ಯಾವುದೇ ಹೊಸ ಗಾಯವನ್ನು ಉಲ್ಲೇಖಿಸಿಲ್ಲ. ಹೀಗಾಗಿ, 34 ವರ್ಷದ ಆಟಗಾರ ಫಿಟ್ ಆಗಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸ್ಟಾರ್ ವೇಗಿಯ ಅಲಭ್ಯತೆಗೆ ಸಂಬಂಧಿಸಿ ಟೀಮ್ ಮ್ಯಾನೇಜ್ಮೆಂಟ್ನಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಪಂದ್ಯದಲ್ಲಿ ಕೇವಲ ಒಬ್ಬ ಫಾಸ್ಟ್ ಬೌಲರ್ನನ್ನು ಆಡಿಸಲಾಗಿತ್ತು. ಉಳಿದಂತೆ ಇಬ್ಬರು ಫಾಸ್ಟ್ ಬೌಲಿಂಗ್ ಆಲ್ರೌಂಡರ್ಗಳು ಅವಕಾಶ ಪಡೆದಿದ್ದರು.
ಟಿ20ಐ ಸರಣಿಯಲ್ಲಿ ಶಮಿ ಅವಕಾಶ ಪಡೆದ ನಂತರ ಕಣಕ್ಕಿಳಿಯುವುದು ಖಚಿತ ಎಂದು ಹೇಳಲಾಗಿತ್ತು. ಅವರನ್ನು ಭಾರತೀಯ ಜೆರ್ಸಿಯಲ್ಲಿ ಕಾಣಲು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ.
ಶಮಿ 2023ರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಭಾರತ ತಂಡದ ಪರ ಆಡಿದ್ದರು. ಪಾದದ ಗಾಯದ ಸಮಸ್ಯೆಗೆ ಸಿಲುಕಿದ್ದ ಕಾರಣ ತಂಡದಿಂದ ದೂರ ಉಳಿದಿದ್ದರು.
ಜಸ್ಪ್ರೀತ್ ಬುಮ್ರಾ ಗಾಯದ ಸಸ್ಪೆನ್ಸ್ ನಡುವೆ ಶಮಿ ಕಣಕ್ಕಿಳಿಯದೇ ಇರುವುದು ಮತ್ತೊಂದು ಸಸ್ಪೆನ್ಸ್ ಹುಟ್ಟು ಹಾಕಿದೆ. ಎರಡನೇ ಟಿ20ಐನಲ್ಲಿ ಕಣಕ್ಕಿಳಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.