ನ್ಯೂಜಿಲೆಂಡ್ ತಂಡವನ್ನು ಬ್ಲ್ಯಾಕ್ಕ್ಯಾಪ್ಸ್, ಕಿವೀಸ್ ಎನ್ನುವುದೇಕೆ?
By Prasanna Kumar P N Jan 10, 2025
Hindustan Times Kannada
ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡಗಳಲ್ಲಿ ಒಂದು ನ್ಯೂಜಿಲೆಂಡ್. ಆದರೆ ಈ ತಂಡವನ್ನು ಬ್ಲ್ಯಾಕ್ಸ್ಕ್ಯಾಪ್ಸ್ ಮತ್ತು ಕಿವೀಸ್ ಎಂದು ಅಡ್ಡ ಹೆಸರಿನಿಂದ ಕರೆಯುವುದೇಕೆ? ಇಲ್ಲಿದೆ ಮಾಹಿತಿ.
ಎರಡು ಅಡ್ಡ ಹೆಸರುಗಳು
ನ್ಯೂಜಿಲೆಂಡ್ ತಂಡವು ತಮ್ಮ ಕಪ್ಪು ಬಣ್ಣದ ಜೆರ್ಸಿ ಮತ್ತು ಕ್ಯಾಪ್ ಧರಿಸುವ ಕಾರಣಕ್ಕೆ ಬ್ಲ್ಯಾಕ್ಕ್ಯಾಪ್ಸ್ ಎಂಬ ಅಡ್ಡಹೆಸರು ಬಂದಿದೆ. ಈ ಹೆಸರನ್ನು ಅಧಿಕೃತವಾಗಿ 1998 ರಲ್ಲಿ ಅಳವಡಿಸಿಕೊಳ್ಳಲಾಯಿತು.
1998ರಿಂದ ಅಳವಡಿಕೆ
1887ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಜರೀಗಿಡದ (Fern-ಫರ್ನ್) ಲಾಂಛನದೊಂದಿಗೆ ಕಡು ನೀಲಿ ಬಣ್ಣದ ಜೆರ್ಸಿ, ಕ್ಯಾಪ್ ಧರಿಸಿತ್ತು. ಕಾಲಾನಂತರ ಜೆರ್ಸಿ ಬಣ್ಣವನ್ನು ಬದಲಾವಣೆ ಮಾಡಿತ್ತು.
ಜರೀಗಿಡದ ಲಾಂಛನ
1995ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಚಿತ್ರಣವನ್ನು ಮರು ಸ್ಥಾಪಿಸಲು ಮಂಡಳಿ ನಿರ್ಧರಿಸಿತು. ಹೀಗಾಗಿ, 1998ರಲ್ಲಿ ತಂಡವನ್ನು ಅಧಿಕೃತವಾಗಿ ಬ್ಲ್ಯಾಕ್ ಕ್ಯಾಪ್ಸ್ ಎಂದು ಕರೆಯಲಾಯಿತು.
1995ರಲ್ಲಿ ನಿರ್ಧಾರ
ಇದು ನ್ಯೂಜಿಲೆಂಡ್ ತಂಡದ ಕಪ್ಪು ಜೆರ್ಸಿ ಮತ್ತು ಕ್ಯಾಪ್‌ಗಳನ್ನು ಪ್ರತಿಬಿಂಬಿಸುವುದಾಗಿದೆ. ಇದಲ್ಲದೆ, ಈ ತಂಡವನ್ನು ಕಿವೀಸ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಅದಕ್ಕೆ ಇಲ್ಲಿದೆ ಉತ್ತರ.
ಕಿವೀಸ್ ಎನ್ನುವುದೇಕೆ?
ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಸಾಮಾನ್ಯವಾಗಿ ಕಿವೀಸ್ ಎಂದೂ ಕರೆಯುತ್ತಾರೆ. ಕಿವಿ ಹಕ್ಕಿ ರಾಷ್ಟ್ರ ಪಕ್ಷಿಯಾದ ಕಾರಣ ಕಿವೀಸ್ ಎಂದು ಕರೆಯಲಾಗುತ್ತಿದೆ.
ಕಿವಿ ಹಕ್ಕಿ ರಾಷ್ಟ್ರ ಪಕ್ಷಿ
ಕಿವಿ ಹಕ್ಕಿ ನ್ಯೂಜಿಲೆಂಡ್‌ನ ವಿಶಿಷ್ಟ ಮತ್ತು ಸಾಂಪ್ರದಾಯಿಕ ಸಂಕೇತ. ಇದು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ.
ಬೇರೆಲ್ಲೂ ಕಾಣಸಿಗಲ್ಲ
ಮೊದಲನೆಯ ಮಹಾಯುದ್ಧದ ವೇಳೆ ನ್ಯೂಜಿಲೆಂಡ್ ಸೈನಿಕರಿಗೆ ಅವರ ಮೂಲ ದೇಶ ಮತ್ತು ಪಕ್ಷಿಯ ಗಾತ್ರ ಚಿಕ್ಕದಾಗಿದ್ದ ಕಾರಣ ಕಿವೀಸ್ ಎಂದು ಅಡ್ಡಹೆಸರು ಇಡಲಾಗಿತ್ತಂತೆ.
ಕಿವೀಸ್ ಎಂದು ಹೆಸರಿಟ್ಟಿದ್ದೇಕೆ?
ನಂತರ ಕಿವೀಸ್ ಎಂಬ ಪದವನ್ನು ರಗ್ಬಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಸಂದರ್ಭಗಳಲ್ಲಿ ನ್ಯೂಜಿಲೆಂಡ್ ರಾಷ್ಟ್ರೀಯ ತಂಡಗಳನ್ನು ಉಲ್ಲೇಖಿಸಲು ಅಳವಡಿಸಿಕೊಳ್ಳಲಾಯಿತು.
ಎಲ್ಲಾ ಕ್ರೀಡೆಗಳಿಗೂ...
ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ