2025ರ ಐಪಿಎಲ್ ಆರಂಭಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಇದರ ನಡುವೆ ಕೆಲ ಫ್ರಾಂಚೈಸಿಗಳು ತಮ್ಮ ನಾಯಕನ ಹುಡುಕಾಟ ನಡೆಸುತ್ತಿವೆ.
ಐಪಿಎಲ್ಗೆ ಸಿದ್ಧತೆ
2022 ರಿಂದ 2024ರ ತನಕ ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಟ್ಟಿರುವ ಆರ್ಸಿಬಿ, ಈಗ ನಾಯಕನ ಹುಡುಕಾಟ ನಡೆಸುತ್ತಿದೆ.
ನಾಯಕತ್ವ ಹುಡುಕಾಟ
ಅಲ್ಲದೆ, ಕೊಹ್ಲಿ ಅವರೇ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟಿಗರು ಮತ್ತು ಫ್ಯಾನ್ಸ್ ಕೂಡ ಇದನ್ನೇ ಬಯಸುತ್ತಿದ್ದಾರೆ.
ಮತ್ತೆ ಕೊಹ್ಲಿಗೆ ಪಟ್ಟ?
ಇದರ ಬೆನ್ನಲ್ಲೇ ಆರ್ಸಿಬಿ ಮುಖ್ಯ ಕೋಚ್ ಆ್ಯಂಡಿ ಪ್ಲವರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಐಪಿಎಲ್ 2025ರ ನಾಯಕತ್ವದ ಕುರಿತು ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.
ಹೆಡ್ಕೋಚ್ ಹೇಳಿದ್ದೇನು?
ಐಪಿಎಲ್ ಪ್ರಾರಂಭಕ್ಕೂ ಮುನ್ನವೇ ನಿರೀಕ್ಷೆ ಹೆಚ್ಚಿಸಿದೆ. ಇದು ಹೊಸ ಯುಗ. ಆದರೆ, ನಾಯಕತ್ವದ ಕುರಿತ ಯಾವುದೇ ಚರ್ಚೆ ನಡೆದಿಲ್ಲ ಎಂದು ಕೋಚ್ ಹೇಳಿದ್ದಾರೆ.
ಯಾವುದೇ ಚರ್ಚೆ ಆಗಿಲ್ಲ
ಕೊಹ್ಲಿ 2013ರಲ್ಲಿ ಆರ್ಸಿಬಿ ನಾಯಕರಾಗಿ ನೇಮಕಗೊಂಡರು. 2016ರಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ 2021ರಲ್ಲಿ ಕೆಳಗಿಳಿದರು.
2013ರಲ್ಲಿ ನಾಯಕನಾಗಿದ್ದ ಕೊಹ್ಲಿ
ಕೊಹ್ಲಿ ಬಳಿಕ ಡು ಪ್ಲೆಸಿಸ್ ನಾಯಕನಾಗಿ ಸೇವೆ ಸಲ್ಲಿಸಿದರು. 2023ರ ಐಪಿಎಲ್ನಲ್ಲಿ ಪ್ಲೆಸಿಸ್ ಗಾಯಗೊಂಡಾಗ ಕೊಹ್ಲಿಯೇ ಕೆಲವು ಪಂದ್ಯಗಳನ್ನು ಮುನ್ನಡೆಸಿದ್ದರು.
ಕೊಹ್ಲಿ ಬಳಿಕ ಪ್ಲೆಸಿಸ್
ಇದೀಗ ಮತ್ತೆ ಅವರೇ ನಾಯಕನಾಗಲಿದ್ದಾರೆ ಎಂದು ವರದಿಯಾಗಿದೆ. ಕೆಲವು ವರದಿಗಳು ರಜತ್ ಪಾಟೀದಾರ್ಗೆ ಪಟ್ಟ ಕಟ್ಟಬಹುದು ಎಂದು ಹೇಳುತ್ತಿವೆ. ಕಾದುನೋಡೋಣ.
ರಜತ್ಗೆ ಲಕ್ ಇದ್ಯಾ?
Photo: RCB Website, IPL Website, HIndustan times, X
ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ