ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ

By Jayaraj
Dec 12, 2024

Hindustan Times
Kannada

ಭಾರತ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್‌ ಅವರಿಗೆ ಇಂದು 43ನೇ ಹುಟ್ಟುಹಬ್ಬ. ಅವರ ವೃತ್ತಿಜೀವನದ ದಾಖಲೆಗಳ ಬಗ್ಗೆ ತಿಳಿಯೋಣ. 

ಯುವರಾಜ್ 2000ದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಮೂಲಕ ಟೀಮ್‌ ಇಂಡಿಯಾ ಪದಾರ್ಪಣೆ ಮಾಡಿದರು. ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ 84 ರನ್ ಸಿಡಿಸಿದರು.

ಫೈನಲ್‌ ಪಂದ್ಯದಲ್ಲಿ, ಯುವರಾಜ್ 69 ರನ್‌ ಗಳಿಸಿ ಭಾರತದ ಐತಿಹಾಸಿಕ 325 ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು.

2007ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಯುವರಾಜ್ ಆಡಿದ್ದರು. ಪಂದ್ಯಾವಳಿಯಲ್ಲಿ ಅವರು ಒಂದು ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದು ಇತಿಹಾಸ.

Instagram

ಯುವರಾಜ್ 2011ರ ಏಕದಿನ ವಿಶ್ವಕಪ್‌ನಲ್ಲಿ 362 ರನ್ ಮತ್ತು 15 ವಿಕೆಟ್‌ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.

ಯುವರಾಜ್‌ಗೆ 2011ರಲ್ಲಿ ಕ್ಯಾನ್ಸರ್ ಪತ್ತೆಯಾಯಿತು. ಆದರೆ ರೋಗವನ್ನೇ ಸೋಲಿಸಿ ಮತ್ತೆ ಭಾರತ ತಂಡಕ್ಕೆ ಮರಳಿದರು. 

2017ರಲ್ಲಿ ಇಂಗ್ಲೆಂಡ್ ವಿರುದ್ಧ 150 ರನ್ ಗಳಿಸಿದ್ದು ಗರಿಷ್ಠ ಏಕದಿನ ಸ್ಕೋರ್.

ಅಂದಾಜು 296.34 ಕೋಟಿ ರೂ ಆಸ್ತಿ ಒಡೆಯನಾಗಿರುವ ಯುವಿ, ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು.

ಚಂಡೀಗಢ, ಗೋವಾ, ಗುರ್ಗಾಂವ್, ಮುಂಬೈ ಮತ್ತು ದೆಹಲಿಯಲ್ಲಿ ಯುವರಾಜ್ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ.

Photos: Yuvraj Singh Instagram

ಭಾಗವತ ಮತ್ತು ಭಗವದ್ಗೀತೆ ನಡುವಿನ ವ್ಯತ್ಯಾಸವೇನು