ಸ್ಪಿನ್ನರ್ ಯುಜ್ವೇಂದ್ರ ಚಹಲ್ ಒಟ್ಟು ಆಸ್ತಿಮೌಲ್ಯ ಎಷ್ಟು?

Images From chahal instagram

By Prasanna Kumar P N
Jan 04, 2025

Hindustan Times
Kannada

ಭಾರತ ತಂಡದ ಲೆಗ್​ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಪ್ರತ್ಯೇಕವಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.

ಸೆಲೆಬ್ರಿಟಿ ಕಪಲ್ಸ್ ವಿಚ್ಛೇದನದ ಕುರಿತು ಮೂಲಗಳು ಖಚಿತಪಡಿಸಿವೆ. ಶೀಘ್ರದಲ್ಲೇ ಈ ವಿಷಯ ಅಧಿಕೃತಗೊಳ್ಳಲಿದೆ ಎನ್ನಲಾಗಿದೆ.

ಇಬ್ಬರು ಇನ್​ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್​ಫಾಲೋ ಮಾಡಿಕೊಂಡಿದ್ದಾರೆ. ಯುಜಿ ತಮ್ಮ ಪತ್ನಿ ಜತೆಗಿನ ಫೋಟೋಗಳನ್ನು ಅಳಿಸಿದ್ದಾರೆ.

ಧನಶ್ರೀ ಯಾವುದೇ ಫೋಟೋಗಳನ್ನು ಅಳಿಸಿಲ್ಲ. ಆದರೆ ಈ ಡಿವೋರ್ಸ್ ಬಗ್ಗೆ ಇಬ್ಬರು ಯಾವುದೇ ಅಧಿಕೃತ ಪೋಸ್ಟ್ ಹಾಕಿಲ್ಲ.

ಈ ವದಂತಿಯ ನಡುವೆ ಯುಜ್ವೇಂದ್ರ ಚಹಲ್ ಅವರ ಆಸ್ತಿ ಮೌಲ್ಯದ ಕುರಿತು ಹುಡುಕಾಟ ಹೆಚ್ಚಾಗಿದೆ. ಇದು ಟ್ರೆಂಡ್ ಕೂಡ ಆಗಿದೆ.

ಯುಜ್ವೇಂದ್ರ ಚಹಲ್ ಅವರ ನಿವ್ವಳ ಮೌಲ್ಯ 70 ರಿಂದ 80 ಕೋಟಿ ಎಂದು abplive ವರದಿ ಮಾಡಿದೆ.

ಇತ್ತೀಚೆಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಪಾಲಾಗಿರುವ ಚಹಲ್ ಪ್ರತಿ ಸೀಸನ್​ಗೆ 18 ಕೋಟಿ ಪಡೆಯಲಿದ್ದಾರೆ.

ಐಪಿಎಲ್​ನಿಂದ ಮಾತ್ರವಲ್ಲ, ವಿವಿಧ ಜಾಹೀರಾತುಗಳಿಂದಲೂ ಅವರಿಗೆ ಆದಾಯ ಹರಿದು ಬರುತ್ತಿದೆ.

ಚಹಲ್ ಬಳಿ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲ್ಯಾಂಬೋರ್ಗಿನಿ ಸೆಂಟೆನಾರಿಯೊ, ರೋಲ್ಸ್ ರಾಯ್ಸ್ ಸೇರಿ ಹಲವಾರು ಐಷಾರಾಮಿ ಕಾರುಗಳಿವೆ.

ವಿವಿಧ ವ್ಯಾಪಾರ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದು, ಚಹಾಲ್ ವಾರ್ಷಿಕ ಆದಾಯ ಸುಮಾರು 7-8 ಕೋಟಿ ಎಂದು ಅಂದಾಜಿಸಲಾಗಿದೆ.

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?