46ನೇ ವಯಸ್ಸಿನಲ್ಲಿ ತಂದೆಯಾದ ಮಾಜಿ ಕ್ರಿಕೆಟಿಗ
By Prasanna Kumar PN
Apr 16, 2025
Hindustan Times
Kannada
ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಜಹೀರ್ ಮತ್ತು ಸಾಗರಿಕ ಪೋಷಕರಾಗಿ ಬಡ್ತಿ ಪಡೆದಿದ್ದು, ತಮ್ಮ ಮನೆಗೆ ಪುಟ್ಟ ಅತಿಥಿಯೊಬ್ಬರನ್ನು ಸ್ವಾಗತಿಸಿದ್ದಾರೆ.
ಗಂಡು ಮಗುವಿಗೆ ಪೋಷಕರಾದ ಈ ಸಿಹಿ ಸುದ್ದಿಯನ್ನು ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಕಂದಮ್ಮನ ಫೋಟೋ ಹಂಚಿಕೊಳ್ಳುವುದರ ಜೊತೆಗೆ ಮಗುವಿನ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಜಹೀರ್ಗೆ 46 ವರ್ಷ.
ನಮ್ಮ ಮಗ 'ಫತೆ ಸಿಂಗ್ ಖಾನ್'ನನ್ನು ಸ್ವಾಗತಿಸುತ್ತಿದ್ದೇವೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಬ್ಲಾಕ್ ಅಂಡ್ ವೈಟ್ ಫೋಟೊ ಜೊತೆಗೆ ಈ ಕ್ಯಾಪ್ಶನ್ ಹಂಚಿಕೊಂಡಿದ್ದಾರೆ.
ಹಂಚಿಕೊಂಡ ಪೋಸ್ಟ್ನಲ್ಲಿ ಜಹೀರ್ ಮತ್ತು ಸಾಗರಿಕ ತಮ್ಮ ಮಗನ ಜೊತೆಗೆ ಇದ್ದಾರೆ. ಮತ್ತೊಂದು ಫೋಟೋದಲ್ಲಿ ಮಗನ ಬೆರಳು ಹಿಡಿದ ಫೋಟೋ ಇದೆ.
ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಹಾಲಿ-ಮಾಜಿ ಕ್ರಿಕೆಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳು ಸಹ ಶುಭಕೋರುತ್ತಿದ್ದಾರೆ.
ಚಕ್ ದೇ ಇಂಡಿಯಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಸಾಗರಿಕಾ ಘಾಟ್ಗೆ ಭಾರತದ ಮಾಜಿ ಬೌಲರ್ನನ್ನು ಪ್ರೀತಿಸಿ ಮದುವೆಯಾದರು.
2017ರ ನವೆಂಬರ್ 23ರಂದು ಎಂಗೇಜ್ಮೆಂಟ್ ಮಾಡಿಕೊಂಡ ಈ ಜೋಡಿ, ಅದಕ್ಕೂ ಮುನ್ನ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.
ಜಹೀರ್ ಖಾನ್ ಪ್ರಸ್ತುತ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂವಹನ ಕೌಶಲ್ಯ ಸುಧಾರಿಸಲು ಈ 5 ಅಪ್ಲಿಕೇಶನ್ ನಿಮಗೆ ನೆರವಾಗುತ್ತೆ
pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ