ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಕ್ರಿಕೆಟ್ ಜೊತೆಗೆ ತಮ್ಮ ವೈಯಕ್ತಿಕ ಜೀವನದಿಂದಲೂ ಪಂತ್ ಸದಾ ಸುದ್ದಿಯಲ್ಲಿರುತ್ತಾರೆ.
ಇದೀಗ ತನ್ನ ಗೆಳತಿಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪಂತ್ ಗರ್ಲ್ಫ್ರೆಂಡ್ ಹೆಸರು ಇಶಾ ನೇಗಿ.
ಇಶಾ ನೇಗಿ ಸೋಷಿಯಲ್ ಮೀಡಿಯಾ ಪ್ರಭಾವಿ. ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅವರು, ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
ಇಶಾ ನೇಗಿ ಡಿಸೆಂಬರ್ 7ರಂದು ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ವಿಶೇಷ ಚಾಕೋಲೇಟ್ ತಿನ್ನುತ್ತಿದ್ದಾರೆ.
ಇಶಾ ನೇಗಿ ಹಂಚಿಕೊಂಡ ಫೋಟೋದಲ್ಲಿ 90% ಕೋಕೋ ಎಂದಿದೆ. ಇದು ಕೋಕೋದಿಂದ ತಯಾರಿಸಿದ ಚಾಕೋಲೇಟ್ ಆಗಿದೆ.
ಕೋಕೋದಿಂದ ತಯಾರಿಸಿದ ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನ ಪಡೆಯಬಹುದು. ಕೋಕೋ ಚಾಕೋಲೇಟ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಚರ್ಮಕ್ಕೂ ಪ್ರಯೋಜನ.
ರಿಷಭ್ ಪಂತ್ ಮತ್ತು ಇಶಾ ನೇಗಿ ಡೇಟಿಂಗ್ ನಡೆಸುತ್ತಿರುವುದು 2019ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತು.
ಇಶಾ, ರಿಷಭ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಉತ್ತಮ ಸ್ನೇಹಿತ ಮತ್ತು ನನ್ನ ಪ್ರೀತಿ ಎಂದು ಕ್ಯಾಪ್ಶನ್ ಹಾಕಿದ್ದರು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?