ಬಿಗ್ ಬ್ಯಾಷ್ ಲೀಗ್ನ 29ನೇ ಪಂದ್ಯದಲ್ಲಿ ಅಜೇಯ 88 ರನ್ ಸಿಡಿಸಿದ ಸಿಡ್ನಿ ಸಿಕ್ಸರ್ ತಂಡದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಅವರು ಗಂಭೀರ ಗಾಯದಿಂದ ಪಾರಾಗಿದ್ದಾರೆ.
ಗಾಯದಿಂದ ಪಾರು
ಹೋಬರ್ಟ್ ಹರಿಕೇನ್ಸ್ ವಿರುದ್ಧದ ರೋಚಕ ಪಂದ್ಯದ ವೇಳೆ ಆಸೀಸ್ ಕ್ರಿಕೆಟಿಗ ವಾರ್ನರ್ ಭಾರೀ ಅವಘಡದಿಂದ ಪಾರಾಗಿದ್ದಾರೆ. ತಲೆಗೆ ಬೀಳಬೇಕಿದ್ದ ದೊಡ್ಡ ಪೆಟ್ಟಿನಿಂದ ಬಚಾವ್ ಆಗಿದ್ದಾರೆ.
ತಲೆಗೆ ಪೆಟ್ಟು ಬೀಳಬೇಕಿತ್ತು
ಸಿಡ್ನಿ ಪರ ಕಣಕ್ಕಿಳಿದ ವಾರ್ನರ್ ಅವರ ಬ್ಯಾಟ್ ಹ್ಯಾಂಡಲ್ ಮುರಿದು ಕುತ್ತಿಗೆಗೆ ಬಡಿಯಿತು. ಆದರೆ, ತಲೆಗೆ ಬಡಿದಿದ್ದರೆ ದೊಡ್ಡ ಅನಾಹುತ ಆಗುವ ಸಂಭವ ಹೆಚ್ಚಿತ್ತು.
ಕುತ್ತಿಗೆಗೆ ಪೆಟ್ಟು
ವೇಗಿ ರಿಲೆ ಮೆರಿಡಿತ್ ಅವರು ಎಸೆದ 4ನೇ ಓವರ್ನ ಮೊದಲ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಮಾಡಲು ಬಿರುಸಾಗಿ ಬ್ಯಾಟ್ ಬೀಸಲು ಯತ್ನಿಸಿದರು. ಆದರೆ ಚೆಂಡು ಬಡಿದ ತಕ್ಷಣವೇ ಬ್ಯಾಟ್ ಕೈಪಿಡಿ ಮುರಿಯಿತು.
ಬ್ಯಾಟ್ ಮುರಿತ
KFC Big Bash League
ಕುತ್ತಿಗೆಗೆ ಬಡಿದ ಬ್ಯಾಟ್ ತಲೆಗೆ ಬಡಿದಿದ್ದರೆ, ದೊಡ್ಡ ಅನಾಹುತವಾಗುವ ಸಂಭವ ಹೆಚ್ಚಿತ್ತು. ಆದರೀಗ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.
ಅಪಾಯದಿಂದ ಪಾರು
ಕುತ್ತಿಗೆಗೆ ಬ್ಯಾಟ್ ಬಡಿದ ತಕ್ಷಣವೇ ವಾರ್ನರ್ ಆತಂಕಕ್ಕೆ ಒಳಗಾದರು. ಬಳಿಕ ಅಂಪೈರ್ಸ್ ಮತ್ತು ಸಹ ಆಟಗಾರರು ಅವರೊಂದಿಗೆ ಬಂದು ಪರಾಮರ್ಶಿಸಿದರು. ಕೊನೆಗೆ ಬ್ಯಾಟ್ ಬದಲಿಸಿ ಕಣಕ್ಕಿಳಿದರು.
ಬ್ಯಾಟ್ ಬದಲಿಸಿ ಕಣಕ್ಕೆ
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿರುವ ವಾರ್ನರ್ ಬಿಗ್ಬ್ಯಾಷ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ 4 ಪಂದ್ಯದಲ್ಲಿ 3 ಅರ್ಧಶತಕ ಸಿಡಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ 49 ರನ್ ಸಿಡಿಸಿ ಅರ್ಧಶತಕ ವಂಚಿತರಾಗಿದ್ದಾರೆ.
IPLನಲ್ಲಿ ಅನ್ಸೋಲ್ಡ್
66 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 88 ರನ್ ಸಿಡಿಸಿದ ವಾರ್ನರ್ ಅವರ ಉತ್ತಮ ಆಟದ ನಡುವೆಯೂ ಸಿಡ್ನಿ ಥಂಡರ್ 6 ವಿಕೆಟ್ಗಳ ಅಂತರದಿಂದ ಸೋಲೊಪ್ಪಿಕೊಂಡಿದೆ.
ವಾರ್ನರ್ ಅಜೇಯ 88 ರನ್
38 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿದ ಟಿಮ್ ಡೇವಿಡ್ ಹೋಬಾರ್ಟ್ ಹರಿಕೇನ್ಸ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಟಿಮ್ ಡೇವಿಡ್ ಅಬ್ಬರ
Photos: X
ರಕ್ಷಣೆಗೆ ಅತಿಹೆಚ್ಚು ಖರ್ಚು ಮಾಡುವ ದೇಶಗಳಿವು; ಭಾರತದ ವೆಚ್ಚ ಎಷ್ಟು?