ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್​ಕೆ ದರ್ಬಾರ್; ಮುಖಾಮುಖಿ ದಾಖಲೆ

By Prasanna Kumar P N
Mar 31, 2024

Hindustan Times
Kannada

ಐಪಿಎಲ್‌ನ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ವಿಶಾಖಪಟ್ಟಣದ ಡಾ.ವೈಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ಎರಡೂ ತಂಡಗಳು ಕಾದಾಟ ನಡೆಸಲಿವೆ.

ಶ್ರೀಮಂತ ಲೀಗ್​​​ನಲ್ಲಿ ಚೆನ್ನೈ ಮತ್ತು ಡೆಲ್ಲಿ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ಎಂಬುದರ ವಿವರ ಈ ಮುಂದಿದೆ.

ಐಪಿಎಲ್‌ನಲ್ಲಿ ಉಭಯ ತಂಡಗಳು 29 ಬಾರಿ ಪರಸ್ಪರ ಎದುರಾಗಿವೆ. ಚೆನ್ನೈ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದೆ.

ಈ ಪೈಕಿ ಸಿಎಸ್​ಕೆ 19ರಲ್ಲಿ ಜಯಿಸಿದ್ದರೆ, ಡೆಲ್ಲಿ ಕೇವಲ 10ರಲ್ಲಿ ಗೆದ್ದಿದೆ. ಗೆಲುವಿನ ಸಂಖ್ಯೆ ವಿಸ್ತರಿಸಲು ಡೆಲ್ಲಿ ಸಜ್ಜಾಗಿದೆ.

ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಎರಡೂ ಪಂದ್ಯಗಳಲ್ಲಿ ಚೆನ್ನೈ ಗೆದ್ದು ಬೀಗಿತ್ತು.

ಬೇಸಿಗೆಯಲ್ಲಿ ಹೊಟ್ಟೆಯ ಕಾಳಜಿ ಹೀಗೆ ಮಾಡಿ