ಅರವಿಂದ್ ಕೇಜ್ರಿವಾಲ್

ದೆಹಲಿ ಚುನಾವಣೆ 2025: ಅರವಿಂದ್ ಕೇಜ್ರಿವಾಲ್ ಬಗ್ಗೆ ತಿಳಿದುಕೊಂಡಿರಬೇಕಾದ  12 ಅಂಶಗಳಿವು 

HT News

By Umesh Kumar S
Feb 08, 2025

Hindustan Times
Kannada

ಆಮ್ ಆದ್ಮಿ ಪಾರ್ಟಿ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್‌‌ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ ಸ್ಪರ್ಧಿಸುತ್ತಿದ್ದಾರೆ. 

PTI

ಅರವಿಂದ್ ಕೇಜ್ರಿವಾಲ್‌ ಹರಿಯಾಣದ ಹಿಸ್ಸಾರ್‌ನಲ್ಲಿ ಜನಿಸಿದರು. ಐಐಟಿ ಖರಗ್‌ಪುರದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.1995ರಲ್ಲಿ ಭಾರತೀಯ ಕಂದಾಯ ಸೇವೆಗೆ ಸೇರಿದರು.

PTI

ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅಗರ್‌ವಾಲ್ ಕೂಡ ಭಾರತೀಯ ಕಂದಾಯ ಸೇವೆಯಲ್ಲಿದ್ದವರು. 1993ರ ಬ್ಯಾಚಿನ ಅಧಿಕಾರಿ. ಬಳಿಕ ರಾಜೀನಾಮೆ ನೀಡಿ ವೈಯಕ್ತಿಕ ಮರಳಿದರು.

PTI

ಅರವಿಂದ್ ಕೇಜ್ರಿವಾಲ್ ಅವರು 1999ರಲ್ಲಿ ಸಾರ್ವಜನಿಕ ಕೆಲಸಗಳು, ಆಹಾರ ಪಡಿತರ ಮತ್ತು ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಪರಿವರ್ತನ್ ಎಂಬ ಸಂಸ್ಥೆಯನ್ನು  ಹುಟ್ಟುಹಾಕಿದರು

ANI

2006ರಲ್ಲಿ ಅರವಿಂದ್ ಕೇಜ್ರಿವಾಲ್ ಭಾರತೀಯ ಕಂದಾಯ ಸೇವೆಯಲ್ಲಿ ಸಲ್ಲಿಸಿದ ಸೇವೆಗಾಗಿ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾದರು

PTI

2011ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಜನಲೋಕಪಾಲ್ ಮಸೂದೆ ಜಾರಿಯಾಗಬೇಕು ಎಂದ ಹೋರಾಟ ನಡೆಸುತ್ತಿದ್ದ ಅಣ್ಣಾ ಹಜಾರೆ ನೇತೃತ್ವದ ಇಂಡಿಯಾ ಅಗೇನಿಸ್ಟ್ ಕರಪ್ಶನ್ (ಐಎಸಿ) ಚಳವಳಿಗೆ ಸೇರಿಕೊಂಡರು. 

2012ರ ನವೆಂಬರ್ 26 ರಂದು ಆಮ್ ಆದ್ಮಿ ಪಾರ್ಟಿ (ಎಎಪಿ) ಎಂಬ ರಾಜಕೀಯ ಪಕ್ಷವನ್ನು ಅರವಿಂದ್ ಕೇಜ್ರಿವಾಲ್ ಹುಟ್ಟುಹಾಕಿದರು. 

PTI

2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 28 ಸ್ಥಾನಗಳ್ನು ಗೆದ್ದುಕೊಂಡು ಎರಡನೇ ಅತಿದೊಡ್ಡ ಪಕ್ಷವಾಗಿ ಎಎಪಿ ಹೊರಹೊಮ್ಮಿತು.

PTI

2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ ಎಎಪಿ ಐತಿಹಾಸಿಕ ವಿಜಯವನ್ನು ದಾಖಲಿಸಿ ಅಧಿಕಾರಕ್ಕೆ ಬಂತು. 2020ರ ಚುನಾವಣೆಯಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿತು.

2024ರ ಲೋಕಸಭಾ ಚುನಾವಣೆಗೆ ತಿಂಗಳಿದ್ದಾಗ ಅರವಿಂದ್ ಕೇಜ್ರಿವಾಲ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು.

ANI

ದೆಹಲಿ ಸರ್ಕಾರ 2021ರಲ್ಲಿ ಜಾರಿಗೊಳಿಸಿದ ಅಬಕಾರಿ ನೀತಿಯಲ್ಲಿ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಭ್ರಷ್ಟಾಚಾರ ನಡೆಸಿದ ಪ್ರಕರಣ ಅದು.

2024ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿತು. ಹೊರ ಬಂದ ಬಳಿಕ ಅವರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯಾಗಿ ಅತಿಷಿ ಮುಖ್ಯಮಂತ್ರಿಯಾದರು.

ಮೂಳೆ ಕ್ಯಾನ್ಸರ್‌ನ ಲಕ್ಷಣಗಳು, ಕಾರಣಗಳು ಇಲ್ಲಿವೆ

image credit to unsplash