ದೆಹಲಿ ಚುನಾವಣಾ ಫಲಿತಾಂಶ

ದೆಹಲಿ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ಹಾಗೂ ಆಡಳಿತ ಪಕ್ಷಗಳು - ಹಿನ್ನೋಟ

By Umesh Kumar S
Feb 08, 2025

Hindustan Times
Kannada

ದೆಹಲಿ ಚುನಾವಣಾ ಫಲಿತಾಂಶ

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆ 5 ರಂದು ಮತದಾನ ನಡೆಯಿತು. ಇಂದು (ಫೆ 8) ಮತ ಎಣಿಕೆ. ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪ)ಗೆ ಹಿನ್ನಡೆ ಆಗಿದ್ದು, ಬಿಜೆಪಿ ಅಧಿಕಾರ ಗದ್ದುಗೆಗೆ ಏರುವ ಲಕ್ಷಣಗಳು ನಿಚ್ಚಳವಾಗಿದೆ. ಈ ಹೊತ್ತಿನಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಆಡಳಿತ ಪಕ್ಷಗಳ ಕಡೆಗೆ ಹಿನ್ನೋಟ ಇಲ್ಲಿದೆ.

ದೆಹಲಿಯ ಮೊದಲ ಮುಖ್ಯಮಂತ್ರಿ ಚೌಧರಿ ಬ್ರಹ್ಮಪ್ರಕಾಶ್. ದೆಹಲಿ ಸಿಎಂ ಆದಾಗ ಅವರಿಗೆ 34 ವರ್ಷ ವಯಸ್ಸು.ಭಾರತದ ಎರಡನೇ ಯುವ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾದ ಅವರು 1952- 1955ರ ತನಕ ಆಡಳಿತ ನಡೆಸಿದರು.

ದೆಹಲಿಯ ಮುಖ್ಯಮಂತ್ರಿಯಾಗಿ ಗುರುಮುಖ್ ನಿಹಾಲ್ ಸಿಂಗ್ 1955-56ರ ತನಕ ಆಡಳಿತ ನಡೆಸಿದರು. ದೆಹಲಿಯ ಎರಡನೇ ಸಿಎಂ ಆಗಿದ್ದ ಸಿಂಗ್, ಒಂದೇ ವರ್ಷ ಆಡಳಿತ ನಡೆಸಿದರು.

ದೆಹಲಿಯಲ್ಲಿ 1956ರ ನವೆಂಬರ್ 1 ರಿಂದ 1993ರ ಡಿಸೆಂಬರ್ 2 ರ ತನಕ ಮುಖ್ಯಮಂತ್ರಿ ಅಥವಾ ವಿಧಾನಸಭೆ ಇರಲಿಲ್ಲ. ಭಾಷಾವಾರು ಪ್ರಾಂತ್ಯ ರಚನೆಯಾದಾಗ ದೆಹಲಿ ಕೇಂದ್ರಾಡಳಿತ ಪ್ರದೇಶವಾಯಿತು. ನೇರ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತು.

ದೆಹಲಿಯ ಮೂರನೇ ಮುಖ್ಯಮಂತ್ರಿಯಾಗಿದ್ದರು ಬಿಜೆಪಿ ನಾಯಕ ಮದನ್‌ಲಾಲ್ ಖುರಾನಾ. 1993 ರಿಂದ 1996ರ ತನಕ ದೆಹಲಿಯ ಆಡಳಿತ ನಡೆಸಿದರು. 

HT

ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಮಾಜಿ ಹಿರಿಯ ಉಪಾಧ್ಯಕ್ಷ ಸಾಹಿಬ್ ಸಿಂಗ್ ವರ್ಮಾ ಅವರು 1996 ರಿಂದ 1998ರ ತನಕ ದೆಹಲಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.

Wiki

ದೆಹಲಿಯ ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳು ಆಡಳಿತ ನಡೆಸಿದವರು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌. ಅವರು 1998ರಲ್ಲಿ ಡಿಸೆಂಬರ್ ತನಕ ಮುಖ್ಯಮಂತ್ರಿಯಾಗಿದ್ದು, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾದರು.

ದೆಹಲಿಯ ದೀರ್ಘಾವಧಿ ಮುಖ್ಯಮಂತ್ರಿ, ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾದವರು ಶೀಲಾ ದೀಕ್ಷಿತ್. 1998 ರಿಂದ 2012ರ ತನಕ ಸತತ ಮೂರು ಅವಧಿಗೆ 15 ವರ್ಷ ಆಡಳಿತ ನಡೆಸಿದರು.

ದೆಹಲಿಯ ಏಳನೇ ಮುಖ್ಯಮಂತ್ರಿ. 2013 ರಿಂದ 2014ರ ನಡುವೆ 49 ದಿನ ದೆಹಲಿ ಸಿಎಂ ಆಗಿದ್ದರು. ಜನ ಲೋಕಪಾಲ್ ಬಿಲ್ ಅಂಗೀಕರಿಸಲಾಗದೇ ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋದರು.ಐತಿಹಾಸಿಕ ಬಹುಮತದೊಂದಿಗೆ 2015 ರಿಂದ 2024ರ ತನಕ ದೆಹಲಿಯ ಮುಖ್ಯಮಂತ್ರಿಯಾಗಿದ್ದರು.

ದೆಹಲಿಯ 8ನೇ ಮುಖ್ಯಮಂತ್ರಿ. ಮೂರನೇ ಮಹಿಳಾ ಮುಖ್ಯಮಂತ್ರಿ. 2024ರ ಸೆಪ್ಟೆಂಬರ್ 21 ರಿಂದ ಮುಖ್ಯಮಂತ್ರಿಯಾಗಿದ್ದು ಈಗ ಚುನಾವಣೆಯನ್ನೂ ಎದುರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಳಿಕ ಅತಿಶಿ ಮುಖ್ಯಮಂತ್ರಿಯಾದರು.

Horoscope: ಆರ್ಥಿಕ ಪ್ರಗತಿ, ವಿವಾದಗಳಿಗೆ ಅವಕಾಶವಿಲ್ಲ; ಮಾರ್ಚ್ 29ರ ದಿನ ಭವಿಷ್ಯ