ಕ್ಯಾರೆಟ್ ಗುಲಾಬ್ ಜಾಮೂನು ರೆಸಿಪಿ
By Rakshitha Sowmya
Jan 05, 2025
Hindustan Times
Kannada
ಮಕ್ಕಳಿಂದ ಹಿರಿಯರವರೆಗೂ ಇಷ್ಟಪಟ್ಟು ತಿನ್ನುವ ಸಿಹಿಗಳಲ್ಲಿ ಜಾಮೂನು ಕೂಡಾ ಒಂದು
ಆದರೆ ನೀವು ಜಾಮೂನು ಪುಡಿ ಇಲ್ಲದೆ ಕ್ಯಾರೆಟ್‌ನಿಂದ ಅಷ್ಟೇ ರುಚಿಯಾದ ಜಾಮೂನು ತಯಾರಿಸಬಹುದು
ತಯಾರಿಸುವುದು ಬಹಳ ಸುಲಭ, ಇದಕ್ಕಾಗಿ ನಿಮಗೆ ಕ್ಯಾರೆಟ್,ತುಪ್ಪ, ಹಾಲು ,ಸಕ್ಕರೆ, ಏಲಕ್ಕಿಪುಡಿ, ಹಾಲಿನ ಪುಡಿ ಸ್ವಲ್ಪ ರವೆ ಬೇಕು
ಮೊದಲು ಸಕ್ಕರೆ, ನೀರು, ಏಲಕ್ಕಿ ಪುಡಿ ಸೇರಿಸಿ ಪಾಕ ತಯಾರಿಸಿಕೊಳ್ಳಿ, ಕ್ಯಾರೆಟ್ ಸಿಪ್ಪೆ ತೆಗೆದು ಅದನ್ನು ತುರಿಯಿರಿ,
ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಸೇರಿಸಿ ಕ್ಯಾರೆಟನ್ನು ಸುವಾಸನೆ ಬರುವರೆಗೂ ಹುರಿಯಿರಿ, ನಂತರ ಹಾಲು ಸೇರಿಸಿ ಬೇಯಿಸಿ
ಕ್ಯಾರೆಟ್ ಜೊತೆ ಸೇರಿಸಿದ ಹಾಲು ಕಡಿಮೆ ಆದಾಗ ಸ್ವಲ್ಪ ಹಾಲಿನ ಪುಡಿ, ರವೆ ಸೇರಿಸಿ ಮಿಕ್ಸ್ ಮಾಡಿ
ಮಿಶ್ರಣ ಗಟ್ಟಿಯಾದ ನಂತರ ಸ್ಟೌವ್ ಆಫ್ ಮಾಡಿ ಉಂಡೆ ಮಾಡಿ ಅದನ್ನು ತುಪ್ಪದಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ
ಕರಿದ ಜಾಮೂನುಗಳನ್ನು ಸಕ್ಕರೆ ಪಾಕದಲ್ಲಿ ಮುಳುಗಿಸಿ ಅರ್ಧ ಗಂಟೆ ನಂತರ ಸರ್ವ್ ಮಾಡಿ
ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ರಿಷಭ್ ಪಂತ್, ಏನದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ