ಕನಸಿನಲ್ಲಿ ಗರ್ಭಿಣಿಯರನ್ನು ನೋಡಿದರೆ ಏನು ಅರ್ಥ? 

By Rakshitha Sowmya
Aug 19, 2024

Hindustan Times
Kannada

ನಿದ್ರಿಸುವಾಗ ಬರುವ ಕನಸುಗಳು ತಮ್ಮದೇ ಅರ್ಥವನ್ನು ಕೊಡುತ್ತದೆ, ಡ್ರೀಮ್ಸ್‌ ಸೈನ್ಸ್‌ ಪ್ರಕಾರ ಕನಸುಗಳು ಶುಭ, ಅಶುಭ ಫಲಗಳನ್ನು ನೀಡುತ್ತದೆ

ಎಷ್ಟೋ ಬಾರಿ ಕನಸಿನಲ್ಲಿ ಗರ್ಭಿಣಿಯರನ್ನು ನೋಡುತ್ತೇವೆ, ಹಾಗಾದರೆ ಈ ಕನಸಿನ ಅರ್ಥವೇನು? 

ಕನಸಿನಲ್ಲಿ ಗರ್ಭಿಣಿಯರನ್ನು ನೋಡುವುದು ಶುಭ ಸಂಕೇತವೆಂದು ಪರಿಗಣಿಸಲಾಗಿದೆ

ನಿಮ್ಮ ಆತ್ಮೀಯರು ಅಥವಾ ನಿಮ್ಮ ಪತ್ನಿ ಗರ್ಭಿಣಿ ಆಗಿರುವಂತೆ ಕನಸು ಕಂಡರೆ ನೀವು ಶೀಘ್ರದಲ್ಲೇ ಶುಭ ಸುದ್ದಿ ಕೇಳುತ್ತೀರಿ ಎಂದರ್ಥ

ಈ ರೀತಿ ಕನಸು ಕಂಡರೆ ನೀವು ಆರ್ಥಿಕವಾಗಿ ಲಾಭ ಗಳಿಸುವಿರಿ ಎಂದರ್ಥ

ನೀವು ಅವಿವಾಹಿತರಾಗಿದ್ದು ಕನಸಿನಲ್ಲಿ ನೀವೇ ಗರ್ಭಿಣಿ ಆದಂತೆ ಕಂಡರೆ ನೀವು ಶೀಘ್ರದಲ್ಲೇ ಹೊಸ ಜೀವನ ಆರಂಭಿಸಲಿದ್ದೀರಿ ಎಂದು ಅರ್ಥ ಕೊಡುತ್ತದೆ

ಅಂದರೆ ನಿಮಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೈ ಗೂಡಲಿದೆ ಎಂದು ಅರ್ಥ ಕೊಡುತ್ತದೆ

ವಿವಾಹಿತ ಮಹಿಳೆ ಕೂಡಾ ತನ್ನನ್ನು ಗರ್ಭಿಣಿಯನ್ನಾಗಿ ಕಾಣುವುದು ಕೂಡಾ ಆಕೆಗೂ, ಕುಟುಂಬಕ್ಕೂ ಬಹಳ ಒಳ್ಳೆಯದು 

ಕನಸಿನಲ್ಲಿ ಗರ್ಭಿಣಿಯರು ಹೆರಿಗೆ ನೋವಿನಿಂದ ಅರಚುವುದನ್ನು ಕಂಡರೆ ಜೀವನದಲ್ಲಿ ಇಷ್ಟು ದಿನಗಳ ಕಾಲ ನೀವು ಅನುಭವಿಸಿದ ಕಷ್ಟ, ನರಳಾಟಗಳು ದೂರಾಗುತ್ತದೆ ಎಂದು ಅರ್ಥ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ರಾತ್ರಿ ನಿದ್ದೆ ಬರ್ತಿಲ್ಲ ಅಂದ್ರೆ ಇಂದಿನಿಂದಲೇ ಈ ಅಭ್ಯಾಸ ರೂಢಿಸಿಕೊಳ್ಳಿ