ಇಂಗ್ಲಿಷ್ ಭಾಷಾಜ್ಞಾನ ಸುಧಾರಿಸೋದು ಹೇಗೆ; ಈ ಅಪ್ಲಿಕೇಷನ್‌ಗಳು ನಿಮಗೆ ನೆರವಾಗುತ್ತೆ

Pexels

By Jayaraj
May 12, 2025

Hindustan Times
Kannada

ನಿರಂತರ ಓದು: ನಿಮ್ಮ ಶಬ್ದಕೋಶ, ಬರವಣಿಗೆ ಮತ್ತು ವಾಕ್ಯ ರಚನೆ ಸುಧಾರಿಸಲು ಪುಸ್ತಕ, ನಿಯತಕಾಲಿಕೆ, ಆನ್‌ಲೈನ್ ಲೇಖನಗಳು ಮತ್ತು ಪತ್ರಿಕೆಗಳನ್ನು ಓದಿ, ಅಭ್ಯಾಸ ಮಾಡಿ. "Kindle" ಮತ್ತು "Wattpad" ಅಪ್ಲಿಕೇಶನ್‌ಗಳು ನಿಮಗೆ ಇಂಗ್ಲಿಷ್ ಓದುವ ಸಾಮಗ್ರಿಗಳನ್ನು ನೀಡುತ್ತವೆ.

Pexels

ಮಾತನಾಡುವುದನ್ನು ಅಭ್ಯಾಸ ಮಾಡಿ: ಇಂಗ್ಲಿಷ್ ಮಾತನಾಡುವ ಮೂಲಕ ನಿಮ್ಮ ಕೌಶಲ್ಯವನ್ನು ಸುಧಾರಿಸಬಹುದು. ಪ್ರತಿದಿನ ಇಂಗ್ಲಿಷ್‌ನಲ್ಲಿಯೇ ಸಂಭಾಷಣೆ ಮಾಡುವುದನ್ನು ಅಭ್ಯಾಸ ಮಾಡಲು "TalkEnglish" ಅಥವಾ "Learn To Speak English" ಇಂತಹ ಸಂವಾದಾತ್ಮಕ ಅಪ್ಲಿಕೇಶನ್‌ಗಳನ್ನು ಬಳಸಿ.

Pexels

ವ್ಯಾಕರಣ ಕಲಿಯಿರಿ: ಎಲ್ಲಾ ಇಂಗ್ಲಿಷ್ ವ್ಯಾಕರಣ ನಿಯಮಗಳನ್ನು ಓದಿ ಮತ್ತು ಅಭ್ಯಾಸ ಮಾಡಿ. ಶಬ್ದಕೋಶ ಮತ್ತು ಸಂವಹನ ಕೌಶಲ್ಯ ಸುಧಾರಿಸುವ ಜೊತೆಗೆ ವಾಕ್ಯ ರೂಪಿಸಲು ನಿಮಗೆ ನೆರವಾಗುತ್ತದೆ. "Vocabulary Builder" ಮತ್ತು "WordUp" ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡುತ್ತದೆ.

Pexels

ಬರವಣಿಗೆ ಅಭ್ಯಾಸ ಮಾಡಿ: ಕಲಿಯಲು ಮತ್ತು ಅಭ್ಯಾಸ ಮಾಡಲು ಬರವಣಿಗೆ ಪ್ರಮುಖ ಅಸ್ತ್ರ. ಹೀಗಾಗಿ ಲೇಖನಗಳು ಮತ್ತು ಪ್ರಬಂಧಗಳನ್ನು ಬರೆಯಲು ಸಮಯ ಕೊಡಿ. ಬರವಣಿಗೆ ಸುಧಾರಿಸಿಕೊಳ್ಳಿ. 

Pexels

ಇಂಗ್ಲಿಷ್ ಚಲನಚಿತ್ರಗಳನ್ನು ವೀಕ್ಷಿಸಿ: ಭಾಷೆ ಕಲಿಯಲು ಇಂಗ್ಲಿಷ್ ಚಲನಚಿತ್ರಗಳನ್ನು ನೋಡುವುದು ಒಂದು ಮೋಜಿನ ಮಾರ್ಗವಾಗಿದೆ. "ನೆಟ್‌ಫ್ಲಿಕ್ಸ್" ಮತ್ತು "ಅಮೆಜಾನ್ ಪ್ರೈಮ್" ಇಂತಹ ಹಲವು ಕಡೆ ಇಂಗ್ಲಿಷ್ ಚಲನಚಿತ್ರಗಳನ್ನು ವೀಕ್ಷಿಸಬಹುದು.

Pexels

ಇಂಗ್ಲಿಷ್ ಪೋಡ್ಕಾಸ್ಟ್ ಆಲಿಸಿ: ಇದು ಇಂಗ್ಲಿಷ್ ಭಾಷೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹಲವಾರು ವಿಷಯಗಳನ್ನು ನಿಮಗೆ ಒದಗಿಸುತ್ತವೆ. ಕಲಿಕೆ ಆರಂಭಿಸಲು "ಸ್ಪಾಟಿಫೈ" ಮತ್ತು "ಯೂಟ್ಯೂಬ್" ನಲ್ಲಿ ವಿವಿಧ ಪಾಡ್ಕಾಸ್ಟ್‌ಗಳಿವೆ.

Pexels

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS