ಪ್ರಮಾಣಪತ್ರ ಸಹಿತ ಕಲಿಯಬಹುದಾದ 5 ಉಚಿತ ಆನ್‌ಲೈನ್ ಕಂಪ್ಯೂಟರ್ ಕೋರ್ಸ್‌ಗಳು
Photo credit: Unsplash
By Jayaraj May 25, 2025
Hindustan Times Kannada
ಪ್ರಮಾಣಪತ್ರ ಕೊಡುವ ಉಚಿತ ಕಂಪ್ಯೂಟರ್ ಕೋರ್ಸ್ ಯಾವುದಿದೆ ಎಂದು ನೀವು ಯೋಚಿಸುತ್ತಿದ್ದರೆ, ಈ ಕೋರ್ಸ್‌ಗಳನ್ನು ನೋಡಿ. ವೃತ್ತಿಬದುಕಿಗೆ ನೆರವಾಗುವ 5 ಉಚಿತ ಆನ್‌ಲೈನ್ ಕಂಪ್ಯೂಟರ್ ಕೋರ್ಸ್‌ಗಳನ್ನು ಫೋರ್ಬ್ಸ್ ಹಂಚಿಕೊಂಡಿದೆ.
Photo: Unsplash
ಲರ್ನ್ ಎಚ್‌ಟಿಎಮ್ಎಲ್: 7 ಗಂಟೆಗಳ ಈ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಭಾಷಾ ಮೂಲಗಳನ್ನು ಕಲಿಯುತ್ತಾರೆ. ನಂತರ ನಾಲ್ಕು ಯೋಜನೆಗಳನ್ನು ಪೂರ್ಣಗೊಳಿಸಲು ತಮ್ಮ ಜ್ಞಾನವನ್ನು ಅನ್ವಯಿಸುತ್ತಾರೆ.
Photo: Unsplash
ಉತ್ತಮ ನಿರ್ಧಾರ ತೆಗೆದುಕೊಳ್ಳಲು ಡಿಜಿಟಲ್ ಥಿಂಕಿಂಗ್ ಟೂಲ್ಸ್: 24 ಗಂಟೆಗಳ ಈ ಕೋರ್ಸ್ ಅನ್ನು ಓಪನ್ ಯೂನಿವರ್ಸಿಟಿಯ ಓಪನ್‌ಲರ್ನ್ ನೀಡುತ್ತದೆ. ಆನ್‌ಲೈನ್ ಹುಡುಕಾಟಗಳನ್ನು ಉತ್ತಮಗೊಳಿಸುವುದು ಹೇಗೆ, ಆಮ್‌ಲೈನ್ ಮಾಹಿತಿಯ ವಿಶ್ವಾಸಾರ್ಹತೆ ನಿರ್ಣಯಿಸುವುದು, ಪೈಥಾನ್ ಬಳಸುವುದನ್ನು ಕಲಿಯುತ್ತಾರೆ.
Photo credit: Unsplash
ರೆಸ್ಪಾನ್ಸಿವ್ ವೆಬ್ ವಿನ್ಯಾಸ: ಈ ಸರ್ಟಿಫಿಕೇಶನ್ ಕೋರ್ಸ್‌ನಲ್ಲಿ, ವೆಬ್ ಪುಟಗಳನ್ನು ನಿರ್ಮಿಸಲು ಡೆವಲಪರ್‌ಗಳು ಬಳಸುವ ಭಾಷೆಗಳನ್ನು ನೀವು ಕಲಿಯುವಿರಿ. ಎಚ್ ಟಿಎಮ್‌ಎಲ್ ಮತ್ತು ವಿನ್ಯಾಸಕ್ಕಾಗಿ ಸಿಎಸ್‌ಎಸ್. ಈ ಕೋರ್ಸ್ ಅವಧಿ 300 ಗಂಟೆ.
Photo Credit: Unsplash
ಸಿಎಸ್ 50: ಕಂಪ್ಯೂಟರ್ ವಿಜ್ಞಾನದ ಪರಿಚಯ: ಹಾರ್ವರ್ಡ್ ವಿಶ್ವವಿದ್ಯಾಲಯವು ನೀಡುವ CS50 ಎಕ್ಸ್ ವಿದ್ಯಾರ್ಥಿಗಳಿಗೆ ಕ್ರಮಾವಳಿಯ ಮೂಲಕ ಹೇಗೆ ಯೋಚಿಸುವುದು ಮತ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು ಹೇಗೆ ಎಂದು ಕಲಿಸುತ್ತದೆ. ಕೋರ್ಸ್ ವಾರಕ್ಕೆ 10 ರಿಂದ 20 ಗಂಟೆಗಳ ಕಾಲ ಇರುತ್ತದೆ.
Photo credit: Unsplash
ಎಐ ಪರಿಚಯ: ಈ ಉಚಿತ ಕೋರ್ಸ್ ಅನ್ನು ಮಿನ್ನಾಲರ್ನ್ ಮತ್ತು ಹೆಲ್ಸಿಂಕಿ ವಿಶ್ವವಿದ್ಯಾಲಯ ರಚಿಸಿದೆ. ಕೋರ್ಸ್ ಅವಧಿ ಆರು ವಾರಗಳು. ಈ ಕೋರ್ಸ್, ಇಂಟ್ರಡಕ್ಷನ್ ಟು ಎಐ, ಎಐ, ಯಂತ್ರ ಕಲಿಕೆ, ಎಐನ ಸಾಮಾಜಿಕ ಪರಿಣಾಮಗಳೊಂದಿಗೆ ಸಮಸ್ಯೆ-ಪರಿಹಾರವನ್ನು ಒಳಗೊಂಡ ಆರು ಮಾಡ್ಯೂಲ್‌ಗಳನ್ನು ಒಳಗೊಂಡಿದೆ.