ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇಬೇಕಾದ 5 ಪುಸ್ತಕಗಳಿವು

PEXELS

By Prasanna Kumar PN
May 15, 2025

Hindustan Times
Kannada

ವೈಯಕ್ತಿಕ ಪ್ರಗತಿಗೆ ಪುಸ್ತಕಗಳನ್ನು ಓದುವುದು ಬಹಳ ಅವಶ್ಯಕ. ಪುಸ್ತಕವು ಒಂದು ಶಕ್ತಿಯುತ ಸಾಧನವಾಗಿದ್ದು, ಜೀವನದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಮತ್ತು ಕೌಶಲ್ಯ ಅಭಿವೃದ್ಧಿಗೆ ಪುಸ್ತಕಗಳ ಓದುವಿಕೆ ಅತ್ಯಗತ್ಯ.

PEXELS

ವೈಯಕ್ತಿಕ ಬೆಳವಣಿಗೆಗಾಗಿ ವಿದ್ಯಾರ್ಥಿಗಳು ಓದಬೇಕಾದ ಟಾಪ್ 5 ಪುಸ್ತಕಗಳು ಇಲ್ಲಿವೆ.

PEXELS

ಜೇಮ್ಸ್ ಕ್ಲಿಯರ್​ ಬರೆದಿರುವ 'ಅಟೋಮಿಕ್ಸ್ ಹ್ಯಾಬಿಟ್ಸ್​' ಪುಸ್ತಕ ನಿಮ್ಮ ಜೀವನ ಚಿತ್ರಣವನ್ನೇ ಬದಲಿಸುತ್ತದೆ. ಅಭ್ಯಾಸಗಳು ಚಿಕ್ಕವೇ ಆದರೂ ಬದ್ಧತೆ ಮತ್ತು ಸ್ಥಿರವಾಗಿ ಮುಂದುವರೆಸಿದರೆ ಅದು ಹೇಗೆ ಆಳವಾದ ಸಕಾರಾತ್ಮಕ ವೈಯಕ್ತಿಕ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬುದನ್ನು ಇದರಲ್ಲಿ ವಿವರಿಸಿದ್ದಾರೆ.

PINTEREST

ಸ್ಟೀಫನ್ ಆರ್​ ಕೋವಿ ಅವರ ರಚಿಸಿರುವ '7 ಹ್ಯಾಬಿಟ್ಸ್​ ಆಫ್​ ಹೈಲಿ ಎಫೆಕ್ಟಿವ್ ಪೀಪಲ್' ಎಂಬ ಪುಸ್ತಕ ರಚಿಸಿದ್ದಾರೆ. ಪರಿಣಾಮಕಾರಿ ವ್ಯಕ್ತಿಗಳಾಗಿ ಬದಲಾಗಲು ಅನುಸರಿಸಬೇಕಾದ 7 ಪ್ರಮುಖ ಅಭ್ಯಾಸಗಳ ಬಗ್ಗೆ ಇದು ನಿಮಗೆ ತಿಳಿಸುತ್ತದೆ.

PINTEREST

ಡೇವಿಡ್ ಜೆ ಷಾರ್ಟ್ಟ್​​​​ ಬರೆದಿರುವ 'ದಿ ಮ್ಯಾಜಿಕ್ ಆಫ್ ಥಿಂಕಿಂಗ್ ಬಿಗ್' ಎಂಬ ಪುಸ್ತಕ ಓದಿದರೆ ನಿಮ್ಮಿಂದ ನೆಗೆಟಿವ್ ಆಲೋಚನೆಗಳು ದೂರ ಓಡಿ ಹೋಗಲಿವೆ. ನಕಾರಾತ್ಮಕ ಚಿಂತನೆಗಳನ್ನು ಸಕಾರಾತ್ಮಕವಾಗಿ ಹೇಗೆ ಬದಲಾಯಿಸಬಹುದು ಎಂದು ಇದು ತಿಳಿಯುತ್ತದೆ. ಇದು ನಿಮ್ಮೊಳಗಿನ ನಕಾರಾತ್ಮಕ ಆಲೋಚನೆಗಳಿಗೆ ಪತ್ತೆ ಮಾಡುವುದರ ಜೊತೆಗೆ ಅವುಗಳಿಗೆ ಮಾರ್ಗದರ್ಶನವೂ ನೀಡುತ್ತದೆ.

PINTEREST

ಎಕ್‌ಹಾರ್ಟ್ ಟೊಲ್ಲೆ ಬರೆದಿರುವ 'ದಿ ಪವರ್ ಆಫ್ ನೌ' ಭೂತ ಮತ್ತು ಭವಿಷ್ಯದ ಬಗ್ಗೆ ಕಲ್ಪನೆಗಳನ್ನು ಬದಿಗಿಟ್ಟು ವರ್ತಮಾನದ ಮೇಲೆ ಕೇಂದ್ರೀಕರಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

PINTEREST

ಜೆನ್ ಸಿನ್ಸೆರೋ ಅವರು ರಚಿಸಿರುವ 'ಯು ಆರ್​ ಬಡಾಸ್' ಪುಸ್ತಕ ಓದಿದರೆ ನಿಮ್ಮ ಬಗ್ಗೆ ಮತ್ತು ನಿಮ್ಮ ನಂಬಿಕೆಗಳ ಬಗ್ಗೆ ನಂಬಿಕೆ ಹೆಚ್ಚಾಗುವುದರ ಜೊತೆಗೆ ನಿಮ್ಮಲ್ಲಿರುವ ಅಪನಂಬಿಕೆಯಿಂದ ಹೊರಬರುವುದು ಹೇಗೆ ಎಂಬುದನ್ನು ಕಲಿಸುತ್ತದೆ.

PINTEREST

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS