10-12ನೇ ತರಗತಿ ನಂತರ ಸರಿಯಾದ ಕೋರ್ಸ್ ಆಯ್ಕೆ ಹೇಗೆ?
By Jayaraj
May 08, 2025
Hindustan Times
Kannada
ಈಗಾಗಲೇ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶಗಳು ಪ್ರಕಟಗೊಂಡಿವೆ. ವಿದ್ಯಾರ್ಥಿಗಳು ಮುಂದೇನು ಎಂಬ ಯೋಚನೆಯಲ್ಲಿದ್ದಾರೆ.
ಕೆಲವು ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯ ಅನುಸಾರ ಕೋರ್ಸ್ ಆಯ್ಕೆ ಮಾಡುತ್ತಾರೆ. ಇನ್ನೂ ಕೆಲವು ಮಕ್ಕಳು ದಿಢೀರ್ ನಿರ್ಧಾರ ಮಾಡುತ್ತಾರೆ.
ಕೋರ್ಸ್ ಆಯ್ಕೆಮಾಡುವಾಗ ನಿಮ್ಮ ಆಸಕ್ತಿಗಳು, ವೃತ್ತಿ ಆಕಾಂಕ್ಷೆಗಳು ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಪರಿಗಣಿಸುವುದು ಮುಖ್ಯ.
ಆಯಾ ಕೋರ್ಸ್‌ನ ಅವಧಿ ನೋಡಿಕೊಳ್ಳಿ. ಕೆಲವು ಅಲ್ಪಾವಧಿಯ ಕೋರ್ಸ್ ವರ್ಷದೊಳಗೆ ಮುಗಿಯುತ್ತವೆ.
ಕೋರ್ಸ್ ಅವಧಿ
ಆಯಾ ಕೋರ್ಸ್ ಶುಲ್ಕ ಮತ್ತು ಸಂಬಂಧಿತ ಇತರ ವೆಚ್ಚಗಳನ್ನು ಗಮನಿಸಿ. ಆರ್ಥಿಕ ಸಾಮರ್ಥ್ಯ ನೋಡಿಕೊಂಡು ನಿರ್ಧರಿಸಿ.
ಕೋರ್ಸ್ ವೆಚ್ಚ
ಕೋರ್ಸ್ ಪೂರ್ಣಗೊಳಿಸಿದ ನಂತರ ಉದ್ಯೋಗಾವಕಾಶ ಹಾಗೂ ವ್ಯಾಪ್ತಿ ಹೇಗಿದೆ ಎಂಬುದನ್ನು ನೋಡಿಕೊಳ್ಳಿ.
ವೃತ್ತಿ ಅವಕಾಶಗಳು
ಕೋರ್ಸ್‌ನ ಪಠ್ಯಕ್ರಮವು ನಿಮ್ಮ ವೃತ್ತಿ ಗುರಿಗಳೊಂದಿಗೆ ಹೊಂದಿಕೆಯಾಗುತ್ತಾ ಎಂದು ಖಚಿತಪಡಿಸಿಕೊಳ್ಳಿ.
ಪಠ್ಯಕ್ರಮ
ನಿಮ್ಮ ಆಸಕ್ತಿ ಮತ್ತು ಕೋರ್ಸ್‌ಗೆ ಸಾಮ್ಯತೆ ಇದ್ದರೆ ಚೆನ್ನ. ಉದಾಹರಣೆಗೆ ಮೇಕಪ್ ಆಸಕ್ತಿ ಇರುವವರು ಬ್ಯೂಟಿಷನ್ ಕಲಿಯಿರಿ.
ಮೊಬೈಲ್ ಬಗ್ಗೆ ಆಸಕ್ತಿ ಮೊಬೈಲ್ ಟೆಕ್ನೀಷಿಯನ್, ಅಡುಗೆ ಬಗ್ಗೆ ಆಸಕ್ತಿ ಇದ್ದರೆ ಹೋಟೆಲ್ ಮ್ಯಾನೇಜ್‌ಮೆಂಟ್ ಹೀಗೆ ಕೋರ್ಸ್ ಆಯ್ಕೆ ಮಾಡುವುದು ಉತ್ತಮ
Pexel
ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ