10ನೇ ತರಗತಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಪೋಷಕರು ಅನುಸರಿಸಬೇಕಾದ 10 ಟಿಪ್ಸ್‌ಗಳಿವು

By Raghavendra M Y
Feb 23, 2024

Hindustan Times
Kannada

ಸ್ಟಡಿ ಪ್ಲಾನ್ ಮಾಡಿ ಕೊಡಿ - ನಿಮ್ಮ ಮಕ್ಕಳೊಂದಿಗೆ ಬೆರೆತು ಅವರಿಗೆ ಟೈಮ್ ಟೇಬಲ್ ಸಿದ್ಧಪಡಿಸುವ ಮೂಲಕ ಅವರ ಪರೀಕ್ಷಾ ಸಿದ್ಧತೆಗೆ ನೀವು ಕೈಜೋಡಿಸಬಹುದು

ಓದಿಗೆ ಬೇಕಾದ ವಸ್ತುಗಳನ್ನ ಜೋಡಿಸಿ - ನೋಟ್ ಬುಕ್, ಪಠ್ಯ ಪುಸ್ತಕ ಹಾಗೂ ಇತರೆ ವಸ್ತುಗಳನ್ನು ಓದಿಗೆ ನೆರವಾಗುವಂತೆ ಸರಿಯಾದ ರೀತಿಯಲ್ಲಿ ಜೋಡಿಸಿ ಕೊಡಿ

ಮುಕ್ತವಾಗಿ ಚರ್ಚಿಸಿ - ನಿಮ್ಮ ಮಕ್ಕಳಿಗೆ ಓದಿನ ವೇಳೆ ಏನಾದರೂ ಸಮಸ್ಯೆಗಳಾಗುತ್ತಿವೆಯೇ, ಓದಿದ್ದು ತಲೆಗೆ ಹತ್ತುತ್ತಿಲ್ಲವೇ ಎಂಬುದರ ಬಗ್ಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಿ

ಪರೀಕ್ಷೆ ಸಂದರ್ಭದಲ್ಲಿ ಮಕ್ಕಳು ಸರಿಯಾಗಿ ನಿದ್ದೆ ಮಾಡುವಂತೆ ನೋಡಿಕೊಳ್ಳಿ. ಅಗತ್ಯ ಆಹಾರ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ

ನಿಮ್ಮ ಮಕ್ಕಳ ಸಾಧನೆಯನ್ನು ಸಂಭ್ರಮಿಸಿ - ಮಕ್ಕಳ ಸಣ್ಣ ಸಣ್ಣ ಸಾಧನೆಗಳನ್ನು ನೀವು ಸಂಭ್ರಮಿಸುವ ಮೂಲಕ ಅವರಿಗೆ ಪರೀಕ್ಷೆಯಲ್ಲಿ ಓದುವುದಕ್ಕೆ ಪ್ರೇರೇಪಿಸಬೇಕು

ನಿತ್ಯ ಅಭ್ಯಾಸ - ನಿಮ್ಮ ಮಕ್ಕಳು ಹಿಂದಿನ ವರ್ಷದ ಪ್ರಶ್ನೆಗಳಿಗೆ ಉತ್ತರ ಬರೆದು ಟೆಸ್ಟ್ ಅಭ್ಯಾಸ ಮಾಡುವಂತೆ ನೋಡಿಕೊಳ್ಳಿ. ಸಮಯ ನಿರ್ವಣೆಯ ಕೌಶಲ್ಯಗಳನ್ನು ಹೇಳಿಕೊಡಿ

10ನೇ ತರಗತಿ ಓದುತ್ತಿರುವ ನಿಮ್ಮ ಮಕ್ಕಳ ಓದಿಗೆ ಸಂಬಂಧಿಸಿದ ಶಿಕ್ಷಕರ ಸಹಕಾರ, ಟ್ಯೂಷನ್, ಆನ್‌ಲೈನ್ ಸಂಪನ್ಮೂಲ ಸೇರಿದಂತೆ ಅಗತ್ಯ ನೆರವು ನೀಡಬೇಕು

ಸ್ವಯಂ ಪ್ರೇರಿತರಾಗಿ ನಿಮ್ಮ ಮಕ್ಕಳೇ ಓದಿಗೆ ಆಸಕ್ತಿ ತೋರುವಂತೆ ಮಾಡಿ. ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದನ್ನ ಯಾವುದೇ ಕಾಣಕ್ಕೂ ಮಾಡಬೇಡಿ 

ನಿಮ್ಮ ಮಕ್ಕಳ ಒಟ್ಟಾರೆ ಬೆಳವಣಿಗೆ ಹಾಗೂ ಧೈರ್ಯ, ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸುವಂತೆ ನೆರವಾಗಿ. ಉತ್ತಮ ಫಲಿತಾಂಶ ಖಂಡಿತಾ ಸಿಗುತ್ತದೆ 

ಬೇಸಿಗೆಯಲ್ಲಿ ಹೊಟ್ಟೆಯ ಕಾಳಜಿ ಹೀಗೆ ಮಾಡಿ