ಪಿಯುಸಿ ಫೇಲ್‌ ಅನ್ನೋ ಚಿಂತೆ ಬಿಡಿ, ನಿಮಗೆಂದೇ ಇರುವ 12 ವೃತ್ತಿ ಅವಕಾಶಗಳಿವು  

Pexel

By Reshma
Apr 10, 2024

Hindustan Times
Kannada

ಪಿಯುಸಿಯಲ್ಲಿ ಫೇಲ್‌ ಆದ ತಕ್ಷಣ ಬದುಕು ಮುಗಿಯಿತು ಎಂದೇನಿಲ್ಲ. ಸಪ್ಲಿಮೆಂಟ್ರಿ ಪರೀಕ್ಷೆ ಬರೆದು ಪಾಸ್‌ ಆಗಬಹುದು. ಇಲ್ಲ ಅಂದ್ರೆ ನಿಮಗಾಗಿ ಇಷ್ಟೊಂದು ಕರಿಯರ್‌ ಆಯ್ಕೆಗಳಿವೆ.

Unsplash

ಸರ್ಟಿಫಿಕೇಟ್‌ ಕೋರ್ಸ್‌ಗಳು: ಪಿಯುಸಿ ಫೇಲ್‌ ಆದವರಿಗೆಂದೇ ಒಂದಿಷ್ಟು ಸರ್ಟಿಫಿಕೇಟ್‌ ಕೋರ್ಸ್‌ಗಳಿವೆ. ಇವು ಡಿಪ್ಲೊಮಾಗಿಂತ ಕಡಿಮೆ ಅವಧಿ ಹೊಂದಿರುತ್ತವೆ. ಡೇಟಾ ಎಂಟ್ರಿ, ಗ್ರಾಫಿಕ್‌ ಡಿಸೈನಿಂಗ್‌, ವೆಬ್‌ ಡಿಸೈನಿಂಗ್‌ ಇವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

Pexel

ಇಂಡಸ್ಟ್ರಿಯಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ (ಐಟಿಐ): ವಿವಿಧ ಐಟಿಐ ಕೋರ್ಸ್‌ಗಳು ನಮ್ಮ ಕೌಶಲ ವೃದ್ಧಿಯ ಜೊತೆಗೆ ಉದ್ಯೋಗಾವಕಾಶವನ್ನೂ ನೀಡುತ್ತವೆ. ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಮೆಕ್ಯಾನಿಕ್‌ ಹಾಗೂ ಇತರೆ.  

12ನೇ ತರಗತಿ ಪಾಸ್‌ ಮಾಡಿಕೊಳ್ಳಲು ಎನ್‌ಐಓಎಸ್‌ನಂತಹ ಮುಕ್ತ ಶಾಲಾ ಕಾರ್ಯಕ್ರಮಗಳಿಗೂ ನೀವು ಜಾಯಿನ್‌ ಆಗಬಹುದು. ಒಮ್ಮೆ ಉತ್ತೀರ್ಣರಾದ ನಂತರ ಇದು ಹೆಚ್ಚಿನ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶ ತೆರೆಯುವಂತೆ ಮಾಡುತ್ತದೆ. 

Unsplash

ನೀವು ವ್ಯಾಪಾರ, ವ್ಯವಹಾರ ಕೌಶಲವನ್ನು ಹೊಂದಿದ್ದರೆ, ಉದ್ಯಮಶೀಲತೆ ಕಲಿಯಲು ಸ್ವಂತ ವ್ಯವಹಾರವನ್ನೂ ಆರಂಭಿಸಬಹುದು. 

Unsplash

ಚಿಲ್ಲರೆ ವ್ಯಾಪಾರದಲ್ಲಿ ನೀವು ನಿಮ್ಮ ವೃತ್ತಿಯನ್ನು ಆರಂಭಿಸಬಹುದು. ಸೇಲ್ಸ್‌ ವಿಭಾಗ, ಕ್ಯಾಷಿಯರ್‌, ಅಂಗಡಿಯಲ್ಲಿ ಮ್ಯಾನೇಜರ್‌ ಇಂತಹ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. 

Unsplash

ಹಾಸ್ಪಿಟಾಲಿಟಿ ಇಂಡಸ್ಟ್ರಿ: ಹೋಟೆಲ್‌ ಸ್ಟಾಫ್‌, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವುದು, ಇವೆಂಟ್‌ ಮ್ಯಾನೇಜ್‌ಮೆಂಟ್‌ ಇಂತಹವಕ್ಕೆ ಸೇರಿಕೊಳ್ಳಬಹುದು. 

Unsplash

ಸೆಕ್ಯೂರಿಟಿ ಸರ್ವೀಸ್‌: ಸೆಕ್ಯೂರಿಟಿ ಇಂಡಸ್ಟ್ರೀಸ್‌ ಇತ್ತೀಚಿಗೆ ವಿಶಾಲವಾಗಿ ಬೆಳೆಯುತ್ತಿದೆ. ಪಿಯುಸಿ ಫೇಲ್‌ ಆದವರು ಸೆಕ್ಯೂರಿಟಿ ಗಾರ್ಡ್‌, ಬೌನ್ಸರ್ಸ್‌ ಹಾಗೂ ಖಾಸಗಿ ಸೆಕ್ಯೂರಿಟಿ ಆಗಿಯೂ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು. 

Unsplash

ಕಂಟೆಂಟ್‌ ಕ್ರಿಯೇಷನ್‌: ಸದ್ಯ ಟ್ರೆಂಡ್‌ನಲ್ಲಿರುವ ವೃತ್ತಿ. ನಿಮ್ಮಲ್ಲಿ ಕಂಟೆಂಟ್‌ ಕ್ರಿಯೇಟ್‌ ಮಾಡುವ ಕೌಶಲವಿದ್ದರೆ ಯುಟ್ಯೂಬ್‌, ಬ್ಲಾಗ್‌ ಹಾಗೂ ಸೋಷಿಯಲ್‌ ಮಿಡಿಯಾಗಳಿಗೆ ಕಟೆಂಟ್‌ ಕ್ರಿಯೇಟ್‌ ಮಾಡಬಹುದು. 

Unsplash

ಫಿಟ್‌ನೆಸ್‌ ಕೋಚ್‌: ನೀವು ಫಿಟ್ನೆಸ್‌ ಟ್ರೈನರ್‌ ಅಥವಾ ಕೋಚ್‌ ಆಗಿಯೂ ವೃತ್ತಿ ಆರಂಭಿಸಬಹುದು. 

Unsplash

ಆರ್ಟ್‌ ಅಂಡ್‌ ಕ್ರಾಫ್ಟ್‌: ಕಲೆ ನಿಮಗೆ ಒಲಿದಿದ್ದರೆ ನೀವು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸುಂದರ ಕ್ರಾಫ್ಟ್‌ ಮಾಡಿ ಅದನ್ನ ಮಾರಾಟ ಮಾಡಿ ಹಣ ಗಳಿಸಬಹುದು.

Unsplash

ಲಾಜಿಸ್ಟಿಕ್‌ ವಿಭಾಗ: ಡ್ರೈವರ್‌, ಡೆಲಿವರಿ ಸರ್ವೀಸ್‌ ಹಾಗೂ ಲಾಜಿಸ್ಟಿಕ್‌ ವಿಭಾಗಗಳಲ್ಲಿ ಪಿಯುಸಿ ಫೇಲ್‌ ಆದವರಿಗೂ ಇದೆ ಅವಕಾಶ. 

ವಿವಿಧ ಟ್ರೇಡ್‌ ಹಾಗೂ ಇಂಡಸ್ಟ್ರಿಗಳಲ್ಲಿ ಅಪ್ರೆಂಟೀಸ್‌ ಕಾರ್ಯಕ್ರಮಗಳಿರುತ್ತವೆ. ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಂತರ ಇದು ನಿಮಗೆ ವೃತ್ತಿ ಬದುಕನ್ನು ತೋರುತ್ತದೆ. 

Unsplash

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು