ಪಿಯುಸಿಯಲ್ಲಿ ಆರ್ಟ್ಸ್‌ ಮಾಡಿದವರಿಗೆ 10 ಬೆಸ್ಟ್‌ ಕರಿಯರ್‌ ಆಯ್ಕೆಗಳಿವು

Unsplash

By Reshma
Apr 10, 2024

Hindustan Times
Kannada

ಪಿಯುಸಿಯಲ್ಲಿ ಆರ್ಟ್‌ ಮಾಡಿ, ನಂತರ ಮುಂದೇನು ಎಂದು ಯೋಚನೆ ಮಾಡುವವರಿಗಾಗಿ ಇಲ್ಲಿದೆ ಹತ್ತು ಹಲವು ಆಯ್ಕೆಗಳು. ಆರ್ಟ್ಸ್‌ ಮಾಡಿದವರು ಫೈನ್‌ ಆರ್ಟ್ಸ್‌, ಫ್ಯಾಷನಿಂಗ್‌ ಡಿಸೈನಿಂಗ್‌, ಜರ್ನಲಿಸಂ, ಸೇರಿದಂತೆ ನಿಮ್ಮ ಒಲವು ಯಾವುದರ ಮೇಲಿದೆ ಎಂಬುದನ್ನು ಪರಿಗಣಿಸಿ ಅದರಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು.

Unsplash

ಪಿಯುಸಿ ಆರ್ಟ್ಸ್‌ ಅಥವಾ ಕಲಾವಿಭಾಗ ಆಯ್ಕೆ ಮಾಡಿಕೊಂಡವರಿಗಾಗಿ ಇರುವ ಒಂದಿಷ್ಟು ಕರಿಯರ್‌ ಆಯ್ಕೆಗಳಿವು.

Unsplash

ಫೈನ್‌ ಆರ್ಟ್ಸ್‌: ಕಲಾ ಕೌಶಲ ನಿಮ್ಮಲ್ಲಿದ್ದರೆ ನೀವು ಪೇಟಿಂಗ್‌, ಕರಕುಶಲ, ಮ್ಯೂಸಿಕ್‌, ಡಾನ್ಸ್‌, ಫಿಲ್ಮ್‌ ಮೇಕಿಂಗ್‌ ಸೇರಿದಂತೆ ಇನ್ನಿತರ ಕೋರ್ಸ್‌ಗಳಲ್ಲಿ ಮುಂದುವರಿಯಬಹುದು. ಇದು ವೃತ್ತಿ ಅವಕಾಶದ ಜೊತೆಗೆ ಕೌಶಲಾಭಿವೃದ್ಧಿಗೂ ಸಹಕಾರಿ. 

Unsplash

ಫ್ಯಾಷನ್‌ ಡಿಸೈನಿಂಗ್‌: ನೀವು ಸ್ಟೈಲಿಶ್‌ ಅಂಡ್‌ ಕ್ರಿಯೇಟಿವ್‌ ಆಗಿ ಯೋಚನೆ ಮಾಡುವ ಸಾಮರ್ಥ್ಯ ಹೊಂದಿದ್ದರೆ ಫ್ಯಾಷನ್‌ ಡಿಸೈನಿಂಗ್‌ ಬಗ್ಗೆ ಯೋಚನೆ ಮಾಡಬಹುದು. ಫ್ಯಾಷನ್‌ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಲೇ ಇರುತ್ತದೆ. 

Unsplash

ಜರ್ನಲಿಸಂ: ಪ್ರಸ್ತುತ ವಿದ್ಯಮಾನಗಳ ಜ್ಞಾನ, ಬರವಣಿಗೆಯ ಕೌಶಲ, ನ್ಯೂಸ್‌ ರೀಡಿಂಗ್‌ ಸಾಮರ್ಥ್ಯ ನಿಮ್ಮಲ್ಲಿದ್ದರೆ ನೀವು ಜರ್ನಲಿಸಂ ಆಯ್ಕೆ ಮಾಡಿಕೊಳ್ಳಬಹುದು. ನ್ಯೂಸ್‌ ರಿಪೋರ್ಟಿಂಗ್‌, ಕಂಟೆಂಟ್‌ ಕ್ರಿಯೇಷನ್‌, ಸೋಷಿಯಲ್‌ ಮಿಡಿಯಾ ಹ್ಯಾಡಲಿಂಗ್‌ ಕೂಡ ಇದರ ಭಾಗವಾಗಿರುತ್ತದೆ. 

Unsplash

ಈವೆಂಟ್‌ ಮ್ಯಾನೇಜ್‌ಮೆಂಟ್‌: ನಿಮ್ಮಲ್ಲಿ ಉತ್ತಮ ಸಂವಹನ ಕೌಶಲ ಹಾಗೂ ಕೊಂಚ ವ್ಯವಹಾರ ಜ್ಞಾನವಿದ್ದರೆ ನೀವು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಉತ್ತಮ ಭವಿಷ್ಯ ಇರುವುದು ಖಂಡಿತ. 

Unsplash

ಅರ್ಥಶಾಸ್ತ್ರ: ಆರ್ಥಿಕ ವ್ಯವಸ್ಥೆ, ಮಾರುಕಟ್ಟೆ ಪ್ರವೃತ್ತಿ ವಿಶ್ಲೇಷಣೆ, ಬ್ಯಾಂಕಿಂಗ್‌, ಹಣಕಾಸು, ಹಣಕಾಸಿನ ಕಾರ್ಯತಂತ್ರ, ಹೀಗೆ ಹತ್ತು ಹಲವು ಅವಕಾಶಗಳ ಆಗರವಾಗಿರುವ ಅರ್ಥಶಾಸ್ತ್ರವನ್ನು ನೀವು ಪಿಯುಸಿ ನಂತರ ಆಯ್ಕೆ ಮಾಡಿಕೊಳ್ಳಬಹುದು. 

Unsplash

ಸೈಕಾಲಜಿ: ಪಿಯುಸಿ ಆರ್ಟ್ಸ್‌ ನಂತರ ಇರುವ ಬೆಸ್ಟ್‌ ಆಯ್ಕೆಗಳಲ್ಲಿ ಸೈಕಾಲಜಿ ಕೂಡ ಒಂದು. ಡಿಗ್ರಿಯಲ್ಲಿ ನೀವು ಮನೋಶಾಸ್ತ್ರ ಆಯ್ಕೆ ಮಾಡಿಕೊಂಡರೆ, ಅದರಲ್ಲೇ ಮಾಸ್ಟರ್‌ ಡಿಗ್ರಿ ಮುಗಿಸಿದರೆ ಹಲವು ವೃತ್ತಿ ಅವಕಾಶಗಳಿವೆ. 

Unsplash

ಟೀಚಿಂಗ್‌: ಶಿಕ್ಷಕ ವೃತ್ತಿ ಇಷ್ಟವಿದ್ದರೆ ಪಿಯುಸಿ ನಂತರ ಯಾವುದೇ ವಿಷಯದಲ್ಲಿ ಡಿಗ್ರಿ ಮುಗಿಸಿ ನಂತರ ಸ್ನಾತಕೋತ್ತರ ಪದವಿ ಮುಗಿಸಿ ಲೆಕ್ಚರರ್‌, ಟೀಚರ್‌ ಆಗಬಹುದು. 

Unsplash

ಎಲ್‌ಎಲ್‌ಬಿ: ಪಿಯುಸಿ ಅಲ್ಲಿ ಆರ್ಟ್ಸ್‌ ಮುಗಿಸಿದವರಿಗೆ ಇರುವ ಬೆಸ್ಟ್‌ ಅವಕಾಶಗಳಲ್ಲಿ ಎಲ್‌ಎಲ್‌ಬಿ ಕೂಡ ಒಂದು. ನೀವು ಬಿಎ ಮುಗಿಸಿ ಕೂಡ ಎಲ್‌ಎಲ್‌ಬಿ ಮಾಡಬಹುದು. 

Unsplash

ನಾಗರಿಕ ಸೇವಾ ಪರೀಕ್ಷೆಗಳು: ಪಿಯುಸಿ ಅಲ್ಲಿ ಆರ್ಟ್ಸ್‌ ಮಾಡಿದವರು ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾ ಡಿಗ್ರಿ ಮುಗಿಸಿಕೊಳ್ಳಬಹುದು.

Unsplash

ಸಾಮಾಜಿಕ ಕಾರ್ಯ: ಪಿಯುಸಿ ನಂತರ ಬಿಎಸ್‌ಡಬ್ಲ್ಯೂ ಮಾಡಿ ನಂತರ ಎಂಎಸ್‌ಡಬ್ಲ್ಯೂ ಮಾಡಿಕೊಳ್ಳಬಹುದು. 

Unsplash

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?