ಬುದ್ಧಿವಂತ ವಿದ್ಯಾರ್ಥಿಗಳು ಎಂದಿಗೂ ಮಾಡದ ತಪ್ಪುಗಳಿವು

By Rakshitha Sowmya
Mar 30, 2024

Hindustan Times
Kannada

ಕೆಲವು ವಿದ್ಯಾರ್ಥಿಗಳು ತಮ್ಮ ಬುದ್ಧಿವಂತಿಕೆಯಿಂದ ಮಾತ್ರವಲ್ಲದೆ ತಮ್ಮ ಪರಿಣಾಮಕಾರಿ ಅಧ್ಯಯನ ವಿಧಾನ, ನಿರ್ಧಾರ, ಕೌಶಲ್ಯದಿಂದಲೂ ಗಮನ ಸೆಳೆಯುತ್ತಾರೆ. 

ವಿದ್ಯಾರ್ಥಿಗಳು ಸಮಯದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ತೋರುವುದಿಲ್ಲ. ಕೊನೆಯ ನಿಮಿಷದವರೆಗೂ ತಮ್ಮ ಕೆಲಸವನ್ನು ಮುಂದೂಡುವುದಿಲ್ಲ.  

ಬುದ್ಧಿವಂತ ವಿದ್ಯಾರ್ಥಿಯು ಎಂದಿಗೂ ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಡೆಗಣಿಸುವುದಿಲ್ಲ.  ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಧ್ಯಾನ, ಪ್ರಾಣಾಯಾಮ ಮಾಡುತ್ತಾರೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. 

ತಮ್ಮ ಬಗ್ಗೆ ಯಾರಾದರೂ ಟೀಕಿಸಿದರೆ ಅದನ್ನು ನಿರ್ಲಕ್ಷಿಸುವುದಿಲ್ಲ, ಅದರ ಬಗ್ಗೆ ಯೋಚಿಸುತ್ತಾ ಕೂರುವುದಿಲ್ಲ. ಅದರ ಬದಲಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆ. 

ಸ್ಮಾರ್ಟ್‌ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪ್ರತ್ಯೇಕವಾಗಿರುವುದಿಲ್ಲ. ಅವರು ಸ್ನೇಹಿತರೊಂದಿಗೆ ಬೆರೆಯುತ್ತಾರೆ. 

ಪ್ರಶ್ನೆಗಳನ್ನು ಕೇಳಲು ಹಿಂಜರಿಯುವುದಿಲ್ಲ. ತಮಗೆ ಅರ್ಥವಾಗದಿದ್ದ ಪಾಠಗಳಿಗೆ, ವಿಚಾರಗಳಿಗೆ ಸ್ಪಷ್ಟನೆ ದೊರೆಯುವವರೆಗೂ ಸುಮ್ಮನಿರುವುದಿಲ್ಲ. 

ಬುದ್ಧಿವಂತ ವಿದ್ಯಾರ್ಥಿಗಳು ಎಂದಿಗೂ ಕಂಠಪಾಠ ಮಾಡುವುದಿಲ್ಲ. ಅದರ ಬದಲಿಗೆ ಪಾಠವನ್ನು ಅರ್ಥ ಮಾಡಿಕೊಳ್ಳುತ್ತಾರೆ. 

Enter text Here

ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳು 24 ಗಂಟೆಯೂ ಓದಲು ಕೂರುವುದಿಲ್ಲ. ಬದಲಿಗೆ ಅವರು ಇಂತಿಷ್ಟು ಸಮಯವನ್ನು ಓದಿಗೆ ಮೀಸಲಿಟ್ಟು ನಡುವೆ ವಿರಾಮ ಪಡೆಯುತ್ತಾರೆ. 

ಜೀವನೋತ್ಸಾಹ, ಭರವಸೆ ಉಕ್ಕಿಸುವ ಟಾಪ್‌ 7 ಸಿನಿಮಾಗಳಿವು