ಎಜುಟೆಕ್ ಟ್ರೆಂಡ್ಸ್: 2025ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಈ ಟೆಕ್ ಬದಲಾವಣೆ ಸಾಧ್ಯತೆ
Pinterest
By Praveen Chandra B Dec 27, 2024
Hindustan Times Kannada
ಎಜುಟೆಕ್ ಆವಿಷ್ಕಾರಗಳಿಗೆ ಸಿದ್ಧರಾಗಿ. ಶಿಕ್ಷಣ ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದೆ. 2025 ಮತ್ತು ಅದರಾಚೆಗಿನ ಕಲಿಕೆಯ ಅನುಭವದಲ್ಲಿ ಬದಲಾವಣೆ ಇರಲಿದೆ.
Pinterest
ಎಐ ಬೋಧಕರು: ಕೃತಕ ಬುದ್ಧಿಮತ್ತೆಯು ಪಾಠ ಮಾಡಲಿದೆ. ಆಯಾ ವಿದ್ಯಾರ್ಥಿಗಾಗಿ ಕಸ್ಟಮೈಸ್ ಮಾಡಿದ ಪಾಠಗಳು ಇರಲಿವೆ. ಪ್ರತಿ ವಿದ್ಯಾರ್ಥಿಯ ವೇಗ ಮತ್ತು ಶೈಲಿಗೆ ತಕ್ಕಂತೆ ಬೋಧಿಸಲಿದೆ.
Pinterest
ವಿಆರ್ ಮತ್ತು ಎಆರ್ ತರಗತಿಗಳು: ವರ್ಚುವಲ್ ಮತ್ತು ವರ್ಚ್ಯುಯಲ್ ರಿಯಾಲಿಟಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುತ್ತಿದೆ. ಇತಿಹಾಸ ಅಥವಾ ವಿಜ್ಞಾನದಂತಹ ವಿಷಯಗಳನ್ನು ಸಿಮ್ಯುಲೇಶನ್ ಗಳ ಮೂಲಕ ಜೀವಂತವಾಗಿ ನೋಡುತ್ತ ಕಲಿಯಬಹುದು.
Pinterest
ಮೈಕ್ರೋ-ಲರ್ನಿಂಗ್: ಸಣ್ಣ, ಮಾಡ್ಯುಲರ್ ಪಾಠಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿಶ್ವಾದ್ಯಂತ ಕಲಿಯುವ ಆಸಕ್ತಿ ಇರುವವರ ಬೇಡಿಕೆಗೆ ತಕ್ಕಂತೆ ಬೈಟ್ ಗಾತ್ರದ, ಪರಿಣಾಮಕಾರಿ ವಿಷಯವನ್ನು ಕಲಿಯಲು ಅವಕಾಶ ನೀಡುತ್ತದೆ.
Pinterest
ಸುರಕ್ಷಿತ ಸರ್ಟಿಫಿಕೇಷನ್‌ಗಾಗಿ ಬ್ಲಾಕ್ ಚೈನ್: ಕಲಿಕಾ ಸಾಧನೆಗಳ ಸರ್ಟಿಫಿಕೇಷನ್‌ಗಳನ್ನು ಅತ್ಯಂತ ಭದ್ರವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಬ್ಲಾಕ್‌ಚೈನ್ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗುತ್ತಿದೆ.
Pinterest
ಶಿಕ್ಷಣದಲ್ಲಿ ಗೇಮಿಫಿಕೇಶನ್ ವಿಸ್ತರಣೆ: ಗೇಮಿಫೈಡ್ ಅಂಶಗಳನ್ನು ಸೇರಿಸುವುದರಿಂದ ತರಗತಿ ಕಲಿಕೆ ಇನ್ನಷ್ಟು ಆಕರ್ಷಕವಾಗುತ್ತದೆ.