ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಒಳ್ಳೆಯ ರೀತಿಯಲ್ಲಿ ಓದಬೇಕು ಎಂಬ ಆಸೆ ಇರುವುದು ಸಹಜ. ಆದರೆ ಕೆಲವು ಮಕ್ಕಳು ಓದುವುದಕ್ಕಿಂತ ಆಟ ಹಾಗೂ ಇತರ ಚಟುವಟಿಕೆಯ ಮೇಲೆ ಹೆಚ್ಚು ಗಮನ ಹರಿಸುತ್ತವೆ.
ಆದರೆ ನಿಮ್ಮ ಮಗು ಓದಿನ ಮೇಲೆ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರೆ ನೀವು ಈ ವಿಚಾರಗಳತ್ತ ಗಮನ ಹರಿಸಬೇಕು.
ವೇಳಾಪಟ್ಟಿ ರಚಿಸಿ: ಮಗುವಿನ ದಿನಚರಿಯ ವೇಳಾಪಟ್ಟಿ ರಚಿಸಿ. ಅದರಲ್ಲಿ ಮಗುವಿನ ಆಟವಾಡಲು ಒಂದಿಷ್ಟು ಸಮಯ ಮೀಸಲಿಡಿ.
ಇತರ ಕೆಲಸಗಳನ್ನು ನಿಗದಿ ಪಡಿಸಿ, ಇದರಿಂದ ನಿಮ್ಮ ಮಗುವಿಗೆ ಜವಾಬ್ದಾರಿಯ ಅರಿವಾಗುತ್ತದೆ. ಅಲ್ಲದೇ, ಅಧ್ಯಯನ ಸಮಯದಲ್ಲಿ ಬೇರೆ ವಿಚಾರಗಳತ್ತ ಹೆಚ್ಚು ಯೋಚಿಸುವುದಿಲ್ಲ.
ಮಕ್ಕಳಿಗೆ ಓದಿನ ಮೇಲೆ ಪ್ರೀತಿ ಹುಟ್ಟುವಂತೆ ಮಾಡಬೇಕು. ಓದಿನ ಮಹತ್ವವನ್ನು ಅರ್ಥ ಮಾಡಿಸಬೇಕು.
ಮಗುವಿನ ಅಧ್ಯಯನದ ಮಹತ್ವವನ್ನು ಪ್ರೀತಿಯಿಂದ ಹೇಳಬೇಕು. ಅಲ್ಲದೇ ಅಧ್ಯಯನ ವೇಳೆ ಕ್ರಿಯಾಶೀಲ ಮನೋಭಾವ ರೂಢಿಸಿಕೊಳ್ಳಲು ಅನುವಾಗಬೇಕು. ಆಗ ಓದಿನ ಮೇಲೆ ಹೆಚ್ಚು ಪ್ರೀತಿ ಹುಟ್ಟುತ್ತದೆ.
ಓದಲು ಆರಂಭಿಸಿದಾಗ ಅವರಿಗೆ ಇಷ್ಟವಾಗುವ ಸುಲಭದ ಪಠ್ಯದಿಂದ ಆರಂಭಿಸಬೇಕು, ಆರಂಭದಲ್ಲೇ ಕಷ್ಟ ಎನ್ನಿಸಿದರೆ ಮಕ್ಕಳು ಓದಲು ಹಿಂದೇಟು ಹಾಕಬಹುದು.
ಮಕ್ಕಳೊಂದಿಗೆ ಓದುವಾಗ ನೀವು ಕುಳಿತುಕೊಳ್ಳಿ. ಮಗುವಿನ ಪುಸ್ತಕವನ್ನು ನೀವೂ ಓದಿ. ಆಗ ಮಗುವಿನಲ್ಲಿ ಓದುವ ಆಸಕ್ತಿ ಹೆಚ್ಚಬಹುದು.
ವಿಡಿಯೊಗಳು: ಮಕ್ಕಳ ಓದಿಗೆ ಸ್ಫೂರ್ತಿಯಾಗುವ ವಿಡಿಯೊಗಳನ್ನು ತೋರಿಸುವ ಮೂಲಕ ಆಸಕ್ತಿ ಹೆಚ್ಚಿಸಬಹುದು.