ಓದಿನಲ್ಲಿ ಟಾಪರ್ ಆಗಿರುವ ವಿದ್ಯಾರ್ಥಿಗಳು ಕೆಲವು ಬೆಸ್ಟ್ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅವರ ಈ ಕ್ರಮಗಳು ಇತರರಿಗೂ ಮಾದರಿಯಾಗಿರುತ್ತದೆ.
ಇದನ್ನು ಅನುಸರಿಸುವ ಮೂಲಕ ಇತರರೂ ಓದಿನಲ್ಲಿ ಉತ್ತಮ ಸಾಧನೆ ಮಾಡಬಹುದು. ಅಂತಹ 5 ಅಭ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ
ಸ್ಥಿರ ವೇಳಾಪಟ್ಟಿ: ಟಾಪರ್ ವಿದ್ಯಾರ್ಥಿಗಳು ಸ್ಥಿರವಾದ ಹಾಗೂ ರಚನಾತ್ಮಕ ಅಧ್ಯಯನ ದಿನಚರಿಯನ್ನು ಹೊಂದಿರುತ್ತಾರೆ. ಪ್ರತಿ ವಿಷಯವನ್ನು ನಿಯಮಿತವಾಗಿ ಅಧ್ಯಯನ ಮಾಡಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುತ್ತಾರೆ.
ಸಮಯ ನಿರ್ವಹಣೆ: ಇವರು ತಮ್ಮ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ. ವಾಸ್ತವಿಕ ಗುರಿಗಳನ್ನು ಹೊಂದಿಸುತ್ತಾರೆ. ಜೊತೆಗೆ ಸಮಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ತರಗತಿಯಲ್ಲಿ ಕ್ರಿಯಾಶೀಲರಾಗಿರುವುದು: ಟಾಪರ್ ವಿದ್ಯಾರ್ಥಿಗಳು ತರಗತಿ ಪ್ರಶ್ನೆ ಕೇಳುವುದು, ನೋಟ್ಸ್ ಮಾಡಿಕೊಳ್ಳುವುದು ಮೂಲಕ ಕ್ರಿಯಾಶೀಲರಾಗಿರುತ್ತಾರೆ.
ಗೊಂದಲ ರಹಿತ ವಾತಾವರಣ: ಟಾಪರ್ ವಿದ್ಯಾರ್ಥಿಗಳು ತಮ್ಮ ಓದಿಗೆ ಗೊಂದಲ, ಕಿರಿಕಿರಿಯಲ್ಲದ ಜಾಗ ಆರಿಸಿಕೊಂಡು, ನೆಮ್ಮದಿಯಿಂದ ಓದುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.
ಸಮತೋಲಿನ ಜೀವನಶೈಲಿ: ಓದಿನ ಜೊತೆಗೆ ಅವರು ಸಮತೋಲಿತ ಜೀವನಶೈಲಿಯತ್ತಲೂ ಗಮನ ಹರಿಸುತ್ತಾರೆ.
ನಾಲಿಗೆಯಲ್ಲಿದೆ ನಿಮ್ಮ ಆರೋಗ್ಯ; ಬಣ್ಣವೇ ಹೇಳುತ್ತೆ ಅನಾರೋಗ್ಯ ಸಮಸ್ಯೆ