ಜಾಣ ವಿದ್ಯಾರ್ಥಿಗಳು ಈ 8 ತಪ್ಪುಗಳನ್ನು ಎಂದಿಗೂ ಮಾಡುವುದಿಲ್ಲ 

By Reshma
Mar 01, 2024

Hindustan Times
Kannada

ಜಾಣ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಮ್ಮ ಬುದ್ಧಿವಂತಿಕೆಯಿಂದ ಮಾತ್ರವಲ್ಲ, ಪರಿಣಾಮಕಾರಿ ಅಧ್ಯಯನ ವಿಧಾನ ಹಾಗೂ ನಿರ್ಧಾರ ತೆಗೆದುಕೊಳ್ಳುವ ಕೌಶಲದಿಂದಲೂ ಉತ್ತಮ ಸಾಧನೆ ಮಾಡುತ್ತಾರೆ. ಸ್ಮಾರ್ಟ್‌ ವಿದ್ಯಾರ್ಥಿಗಳು ಎಂದಿಗೂ ಈ 8 ತಪ್ಪುಗಳನ್ನು ಮಾಡುವುದಿಲ್ಲ. ಯಾವುದದು ನೋಡಿ. 

ಸ್ಮಾರ್ಟ್‌ ವಿದ್ಯಾರ್ಥಿಗಳು ಸಮಯ ನಿರ್ವಹಣೆಯ ಪ್ರಾಮುಖ್ಯವನ್ನು ಅರಿಯುತ್ತಾರೆ. ಅವರು ಯಾವುದೇ ಕೆಲಸವನ್ನು ಕೊನೆಯ ಕ್ಷಣದವರೆಗೂ ಇರಿಸಿಕೊಳ್ಳುವುದಿಲ್ಲ. ವಿಳಂಬ ಪ್ರವೃತ್ತಿ ಅವರಲ್ಲಿ ಇರಲು ಸಾಧ್ಯವೇ ಇಲ್ಲ.

ಸ್ವಯಂ ಕಾಳಜಿ: ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಗಮನ ಕೊಡುವುದು ಬಹಳ ಮುಖ್ಯ. ನಿದ್ದೆ, ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಈ ವಿಚಾರಗಳ ಮೇಲೂ ಬುದ್ಧಿವಂತ ವಿದ್ಯಾರ್ಥಿಗಳು ಗಮನ ಹರಿಸುತ್ತಾರೆ. 

ಟೀಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸುವುದು: ಯಾರು, ಯಾವುದೇ ರೀತಿ ಟೀಕೆ ಮಾಡಿದ್ರು ಸ್ಮಾರ್ಟ್‌ ವಿದ್ಯಾರ್ಥಿಗಳನ್ನು ಅದನ್ನು ಧನಾತ್ಮಕವಾಗಿ ಸ್ವೀಕರಿಸಿ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಮಾರ್ಗ ಕಂಡುಕೊಳ್ಳುತ್ತಾರೆ. ಇದು ಬೆಳವಣಿಗೆಗೆ ಬಹಳ ಅವಶ್ಯ. 

ಸ್ಮಾಟ್‌ ವಿದ್ಯಾರ್ಥಿಗಳು ಎಲ್ಲರೊಂದಿಗೂ ಬೆರೆಯುತ್ತಾರೆ. ಆದರೆ ಓದುವ ಹಾಗೂ ಮೋಜು ಮಾಡುವ ಗೆಳೆಯರ ಗುಂಪು ಮಾಡಿಕೊಳ್ಳುತ್ತಾರೆ. ಯಾರ ಜೊತೆ ಹೇಗಿರಬೇಕೋ ಹಾಗೆ ಇರುತ್ತಾರೆ. 

ಬುದ್ಧಿವಂತ ವಿದ್ಯಾರ್ಥಿಗಳು ಪದೇ ಪದೇ ಪ್ರಶ್ನೆ ಕೇಳುತ್ತಾರೆ. ಯಾವುದೇ ವಿಚಾರದಲ್ಲೂ ಸ್ಪಷ್ಟನೆ ಹುಡುಕುವ ಪ್ರಯತ್ನ ಮಾಡುತ್ತಾರೆ.

ಸ್ಮಾರ್ಟ್‌ ವಿದ್ಯಾರ್ಥಿಗಳು ಕಂಠಪಾಠಕ್ಕಿಂತ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆಳವಾಗಿ ಗ್ರಹಿಸುವ ಗುಣ ಅವರಲ್ಲಿರುತ್ತದೆ. ಇದು ಸಮಸ್ಯೆಗಳ ಪರಿಹಾರಕ್ಕೂ ನೆರವಾಗುತ್ತದೆ. 

ಜಾಣ ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯದ ಮೇಲೂ ಗಮನ ಹರಿಸುತ್ತಾರೆ. ಒತ್ತಡವನ್ನು ನಿರ್ವಹಿಸುವ ಮಾರ್ಗ ಕಂಡುಕೊಳ್ಳುತ್ತಾರೆ.

ವಿರಾಮದ ಮಹತ್ವವನ್ನು ಅರಿಯುತ್ತಾರೆ. ಸತತವಾಗಿ ಓದುವುದರಿಂದ ಗಮನ ನೀಡುವುದು ಹಾಗೂ ಉತ್ಪಾದಕ ಗುಣಗಳ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಎದುರಿಸಲು ಪ್ರಯತ್ನಿಸುತ್ತಾರೆ. 

ಈ 5 ಟಿಪ್ಸ್ ಫಾಲೊ ಮಾಡಿದ್ರೆ ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆ ನಿಲ್ಲುತ್ತೆ