ಓದಿದ್ದು ನೆನಪುಳಿಯಲು ಈ ಸರಳ ಟಿಪ್ಸ್ ಅನುಸರಿಸಿ
Pinterest
By Jayaraj
Feb 11, 2025
Hindustan Times
Kannada
ಪರೀಕ್ಷೆ ಬಂದಾಗ ಮಕ್ಕಳಿಗೆ ಓದುವ ಚಿಂತೆ. ಆದರೆ, ಪರೀಕ್ಷೆ ಚೆನ್ನಾಗಿ ಬರೆಯಲು ಚೆನ್ನಾಗಿ ಓದಿರಬೇಕು. ಅದು ಅರ್ಥವಾಗಿರಬೇಕು.
Pinterest
ಓದಿದ್ದು ನೆನಪುಳಿಯಲು ಕೆಲವೊಂದು ಸರಳ ತಂತ್ರಗಳಿವೆ. ಇವು ನೀವು ಅನುಸರಿಸಿದರೆ, ಓದಿದ್ದು ಮರೆಯಲ್ಲ.
Pexel
ತಂತ್ರ 1: ಮನನ (ರಿವಿಷನ್), ಪುನರಾವರ್ತಿತ ಓದು ದೀರ್ಘಕಾಲದ ನೆನಪು ಸುಧಾರಿಸುತ್ತದೆ. ಒಂದೇ ದಿನ ಅತಿಯಾಗಿ ಓದುವ ಬದಲು ನಿಯಮಿತವಾಗಿ ಅರ್ಥಮಾಡಿಕೊಂಡು ಓದಿ.
Pinterest
ತಂತ್ರ 2: ಗಟ್ಟಿಯಾಗಿ ಓದುವುದು, ಗೆಳೆಯರೊಂದಿಗೆ ಚರ್ಚಿಸುವುದನ್ನು ಮಾಡಿ. ಗುಂಪು ಓದು ಅಭ್ಯಾಸ ಮಾಡಿ
Pinterest
ತಂತ್ರ 3: ನೀವು ಓದಿದ್ದನ್ನು, ಕಲಿತದ್ದನ್ನು ಇತರರಿಗೆ ಕಲಿಸಿ. ಇನ್ನೊಬ್ಬರಿಗೆ ಹೇಳಿಕೊಡುವುದು ನಮ್ಮ ನೆನಪು, ತಿಳುವಳಿಕೆ ಹೆಚ್ಚಿಸುತ್ತದೆ.
Pinterest
ತಂತ್ರ 4: ಬರೆದು ಕಲಿಯಿರಿ. ಓದಿದ್ದನ್ನು ಬರೆದರೆ ನೆನಪಿನಲ್ಲಿ ಹೆಚ್ಚು ಸಮಯ ಉಳಿಯುತ್ತದೆ. ಆ ವಿಷಯ ಆಳವಾಗಿ ಅರ್ಥವಾಗುತ್ತದೆ.
Pinterest
ತಂತ್ರ 5: ಕಲಿಕೆ ಮತ್ತು ನಡಿಗೆಯನ್ನು ಸಂಯೋಜಿಸಿ. ಟಿಪ್ಪಣಿ ಕೇಳುವಾಗ ನಡೆಯಿರಿ. ಇದು ಗಮನ ಹೆಚ್ಚಿಸುವುದರ ಜೊತೆಗೆ ದೈಹಿಕ ಆರೋಗ್ಯಕ್ಕೂ ಒಳ್ಳೆಯದು.
Pinterest
ತಂತ್ರ 6: ಸಾಕಷ್ಟು ನಿದ್ದೆ ಮಾಡಿ. ದೇಹಕ್ಕೆ ಸರಿಯಾಗಿ ವಿಶ್ರಾಂತಿ ಕೊಡಿ. ಆ ಸಮಯದಲ್ಲಿ ನಿಮ್ಮ ಮೆದುಳು ಕಲಿಕೆಯನ್ನು ಕ್ರೋಢೀಕರಿಸುತ್ತದೆ.
Pinterest
ತಂತ್ರ 7:ಸ್ವಯಂ ಪರೀಕ್ಷೆ ಬರೆಯಿರಿ. ಓದಿದ್ದು ನೆನಪುಳಿಯಲು ನೀವಾಗಿಯೇ ಪರೀಕ್ಷೆ ಬರೆಯಿರಿ. ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ.
ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ