ಪರೀಕ್ಷೆಗೆ ಓದಿಲ್ಲವೆಂಬ ಚಿಂತೆ ಬೇಡ, 1 ವಾರದ ರಿವಿಷನ್‌ಗೆ ಇಲ್ಲಿದೆ ಸಲಹೆ 

Photo credit: Unsplash

By Jayaraj
Feb 27, 2025

Hindustan Times
Kannada

SSLC, PUC ಸೇರಿದಂತೆ ನೀವು ಯಾವುದೇ ಪರೀಕ್ಷೆಗೆ ಅಂತಿಮ ಸಿದ್ದತೆ ನಡೆಸುತ್ತಿದ್ದರೆ, ಏಳು ದಿನಗಳ ಮನನ (ರಿವಿಶನ್) ಯೋಜನೆ ನಿಮಗೆ ಸಹಾಯ ಮಾಡುತ್ತದೆ.

Photo Credit: Pixabay

ದಿನ 1: ನೀವು ಗಮನ ಹರಿಸಬೇಕಾದ, ಕಷ್ಟವೆನಿಸುವ ವಿಷಯಗಳನ್ನು ಗುರುತಿಸಿ. ಯಾವ ದಿನದಂದು ಓದಬೇಕು ಎಂಬ ರಿವಿಷನ್ ವೇಳಾಪಟ್ಟಿ ಮಾಡಿ. ನೋಟ್ಸ್‌ ಒಟ್ಟುಗೂಡಿಸಿ, 2ನೇ ದಿನದ ಅಧ್ಯಯನ ಯೋಜಿಸಿ.

Photo Credit: Pixabay

ದಿನ 2: ನಿಮ್ಮ ವೇಳಾಪಟ್ಟಿ ಪಾಲಿಸಿ. ಆದರೆ, ವಿರಾಮ ಸರಿಯಾಗಿ ತೆಗೆದುಕೊಳ್ಳಿ. ಹಳೆಯ ಪ್ರಶ್ನೆ ಪತ್ರಿಕೆ ನೋಡಿ ಮನನ, ಪ್ರಮುಖ ಅಂಶಗಳ ಟಿಪ್ಪಣಿ ಮಾಡಿಟ್ಟುಕೊಳ್ಳಿ.

Photo Credit: Unsplash

ದಿನ 3: ನಡಿಗೆ ಅಥವಾ ಸ್ವಲ್ಪ ವ್ಯಾಯಾಮ ಮಾಡಿ. ನಿಮ್ಮ ಮೆದುಳು ಮತ್ತೆ ಚುರುಕಾಗುತ್ತದೆ. ವ್ಯಾಯಾಮದ ನಂತರ ಹೆಚ್ಚು ಸ್ಪಂದಿಸುತ್ತದೆ.

Photo Credit: Unsplash

ದಿನ 4: ನೀವು ಈಗಾಗಲೇ ಓದಿದ ವಿಷಯಗಳಿಗೆ ಮತ್ತೆ ಹಿಂತಿರುಗಿ. ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಂಡು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಸಮಯ ಸೆಟ್‌ ಮಾಡಿ ಬರೆಯಲು ಅಭ್ಯಾಸ ಮಾಡಿ ಮಾಡಿ.

Photo credit: Unsplash

ದಿನ 5: ನಿಮ್ಮ ಗೊಂದಲ, ಪ್ರಶ್ನೆಗಳನ್ನು ಪಟ್ಟಿ ಮಾಡಿ. ಸಹಾಯ ಬೇಕಿದ್ದರೆ ಸ್ನೇಹಿತರೊಂದಿಗೆ ಗುಂಪು ಅಧ್ಯಯನ ಮಾಡಿ. ಶಿಕ್ಷಕರು, ಮನೆಯವರ ಸಹಾಯ ಪಡೆಯಿರಿ.

Photo credit: Unsplash

ದಿನ 6: ಫ್ಲ್ಯಾಶ್ ಕಾರ್ಡ್‌ ರಚಿಸಲು ನಿಮ್ಮ ಎಲ್ಲಾ ಟಿಪ್ಪಣಿ, ಉಲ್ಲೇಖಗಳು ಮತ್ತು ಸೂತ್ರಗಳನ್ನು ಸಾಂದ್ರೀಕರಿಸಿ. ಏನೂ ಮರೆತಿಲ್ಲ ಎಂಬುದನ್ನು ಖಚಿತಪಡಿಸಿ.

Photo Credit: Pixabay

ದಿನ 7: ಫ್ಲ್ಯಾಶ್ ಕಾರ್ಡ್ ಮತ್ತು ಟಿಪ್ಪಣಿ ನೋಡದೆ ಏನೆಲ್ಲಾ ನೆನಪಿಟ್ಟುಕೊಳ್ಳಬಹುದು ಎಂಬುದನ್ನು ನೋಡಿ. ಅತಿಯದ ಅಧ್ಯಯನ ಬೇಡ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ.

Photo credit: Unsplash

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS