ಇಸ್ರೋದಲ್ಲಿ ಉದ್ಯೋಗ ಪಡೆಯಲು ನೆರವಾಗುವ 5 ಕೋರ್ಸ್‌ಗಳು

ISRO

By Jayaraj
May 11, 2025

Hindustan Times
Kannada

ನಿಮಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಕೆಲಸ ಮಾಡುವ ಬಯಕೆ ಇದ್ದರೆ, ಅದಕ್ಕೆ ಸೂಕ್ತವಾಗುವ ಶಿಕ್ಷಣ ಮತ್ತು ಕೌಶಲ್ಯಗಳು ಬೇಕು. ಇಸ್ರೋದಲ್ಲಿ ಎಂಜಿನಿಯರಿಂಗ್, ವಿಜ್ಞಾನ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಉದ್ಯೋಗಗಳಿವೆ.

Pexels

ಇಸ್ರೋದಲ್ಲಿ ಉದ್ಯೋಗ ಪಡೆಯಲು ನಿಮಗೆ ಸಹಾಯ ಮಾಡುವ ಐದು ಕೋರ್ಸ್‌ ವಿವರ ಇಲ್ಲಿದೆ.

Pexels

ಎಂಜಿನಿಯರಿಂಗ್ ಅಥವಾ ವಿಜ್ಞಾನದಲ್ಲಿ ಪದವಿ: ತಾಂತ್ರಿಕ ವಿಷಯಗಳೇ ಮುಖ್ಯವಾಗಿರುವ ಇಸ್ರೋದ ಹೆಚ್ಚಿನ ಉದ್ಯೋಗಗಳಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್) ಅಥವಾ ವಿಜ್ಞಾನ ಕ್ಷೇತ್ರ (ಭೌತಶಾಸ್ತ್ರ, ರಸಾಯನಶಾಸ್ತ್ರ, ಅಥವಾ ಗಣಿತದಂತಹ) ಅಗತ್ಯವಿದೆ.

Pexels

ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ: ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದರೆ, ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ಉತ್ತಮ. ಬಾಹ್ಯಾಕಾಶ ನೌಕೆ, ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಇಲ್ಲಿ ಕಲಿಯಬಹುದು.

Pexels

ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್: ರಿಮೋಟ್ ಸೆನ್ಸಿಂಗ್ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ವಿಷಯದಲ್ಲೂ ಇಸ್ರೋದಲ್ಲಿ ಸಾಕಷ್ಟು ಕೆಲಸಗಳಿವೆ. ಇಂಥಾ ಕೋರ್ಸ್ ಮೂಲಕ ಈ ವಿಷಯಗಳ ಬಗ್ಗೆ ಕಲಿಯುವುದರಿಂದ ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವುದು, ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡುವುದು ಮತ್ತು ಭೌಗೋಳಿಕ ಡೇಟಾ ನಿರ್ವಹಣೆಗೆ ಸಂಬಂಧಿಸಿದ ಉದ್ಯೋಗಗಳನ್ನು ಗಿಟ್ಟಿಸಬಹುದು.

Pexels

ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆ: ಬಾಹ್ಯಾಕಾಶ ಸಂಶೋಧನೆ ಮಾಡಲು ಅಥವಾ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಲು ಬಯಸಿದರೆ, ಬಾಹ್ಯಾಕಾಶ ವಿಜ್ಞಾನ, ಖಗೋಳ ಭೌತಶಾಸ್ತ್ರ ಅಥವಾ ಗ್ರಹ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಮಾಡಿ.

Pixabay

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್: ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದ ಬಗ್ಗೆ ತಿಳಿದಿರುವ ಎಂಜಿನಿಯರ್‌ಗಳು ಸಂವಹನ ವ್ಯವಸ್ಥೆ, ಬಾಹ್ಯಾಕಾಶ ನೌಕೆಯೊಳಗಿನ ಎಲೆಕ್ಟ್ರಾನಿಕ್ಸ್ ಮತ್ತು ಇಸ್ರೋದ ಕಾರ್ಯಾಚರಣೆಗಳಿಗೆ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲು ಸಹಾಯ ಮಾಡುತ್ತಾರೆ.

Pexels

ಇಂಟರ್ನ್‌ಶಿಪ್, ಸಂಶೋಧನಾ ಯೋಜನೆಗಳು ಅಥವಾ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕಲಿಕೆಯ ಮೂಲಕ ಅನುಭವ ಪಡೆಯುವುದು ಇಸ್ರೋದಲ್ಲಿ ಉದ್ಯೋಗ ಪಡೆಯಲು ಸುಲಭಗೊಳಿಸುತ್ತದೆ.

ISRO

ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವವರೊಂದಿಗೆ ಸಂಪರ್ಕ ಸಾಧಿಸುವುದರ ಮೂಲಕ ಉತ್ತಮ ಸಲಹೆ ಮತ್ತು ಇಸ್ರೋದಲ್ಲಿ ನಿಮ್ಮ ಹೆಜ್ಜೆಯನ್ನು ಇಡಲು ಅವಕಾಶ ಸಿಗುತ್ತದೆ.

Pexels

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS