ಕಾಮರ್ಸ್ ವಿದ್ಯಾರ್ಥಿಗಳಿಗೆ ಲಕ್ಷ ಲಕ್ಷ ಸಂಬಳ ತಂದುಕೊಡುವ 5 ಅಧುನಿಕ ಕೋರ್ಸ್​ಗಳಿವು

By Prasanna Kumar PN
May 16, 2025

Hindustan Times
Kannada

ನಾವಿಂದು ಕಾಮರ್ಸ್​ ವಿದ್ಯಾರ್ಥಿಗಳಿಗೆ ಐದು ಅತ್ಯುತ್ತಮ ಆಧುನಿಕ ಕೋರ್ಸ್‌ಗಳ ಬಗ್ಗೆ ಹೇಳಲಿದ್ದೇವೆ. 

ಡಿಜಿಟಲ್ ಮಾರ್ಕೆಟಿಂಗ್: ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಂದು ಕಂಪನಿಗೂ ಆನ್‌ಲೈನ್ ಬ್ರ್ಯಾಂಡಿಂಗ್, ಸಾಮಾಜಿಕ ಮಾಧ್ಯಮ ಉಪಸ್ಥಿತಿ ಮತ್ತು ಡಿಜಿಟಲ್ ಜಾಹೀರಾತು ಅತ್ಯಗತ್ಯ.

ಈ ಕೋರ್ಸ್‌ಗಳಲ್ಲಿ ಎಸ್​ಇಒ, ಕಂಟೆಂಟ್ ಮಾರ್ಕೆಟಿಂಗ್, ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್, ಗೂಗಲ್ ಜಾಹೀರಾತು ಮತ್ತು ಅನಾಲಿಟಿಕ್ಸ್‌ನಂತಹ ಕೌಶಲ್ಯಗಳನ್ನು ಕಲಿಸಲಾಗುತ್ತದೆ.

ಡೇಟಾ ವಿಶ್ಲೇಷಣೆ ಮತ್ತು ಬ್ಯುಸಿನೆಸ್ ಇಂಟೆಲಿಜೆನ್ಸ್​: ಈ ಕೋರ್ಸ್‌ನಲ್ಲಿ ಎಕ್ಸೆಲ್, ಎಸ್​ಕ್ಯೂಎಲ್​, ಪೈಥಾನ್, ಟ್ಯಾಬ್ಲೋ ಮತ್ತು ಪವರ್ ಬಿಐನಂತಹ ಪರಿಕರಗಳನ್ನೂ ಕಲಿಸಲಾಗುತ್ತದೆ. 

ವೇತನ: ಈ ಕ್ಷೇತ್ರದಲ್ಲಿ ಆರಂಭಿಕ ವೇತನವು ವಾರ್ಷಿಕ 6 ರಿಂದ 8 ಲಕ್ಷ ರೂ.ಗಳವರೆಗೆ ಇರುತ್ತದೆ.

ಫಿನ್​ಟೆಕ್ ಕೋರ್ಸ್: ಹಣಕಾಸು ಮತ್ತು ತಂತ್ರಜ್ಞಾನದ ಸಂಯೋಜನೆಯಾದ ಈ ವಲಯವು ವೇಗವಾಗಿ ಮುಂದುವರಿಯುತ್ತಿದೆ. ಪೇಮೆಂಟ್ ಗೇಟ್‌ವೇ, ಬ್ಲಾಕ್‌ಚೈನ್, ಕ್ರಿಪ್ಟೋಕರೆನ್ಸಿ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ವಿಷಯಗಳನ್ನು ಆಧರಿಸಿದ ಈ ಕೋರ್ಸ್ ಉತ್ತಮವಾಗಿದೆ.

ಇ-ಕಾಮರ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್​ಮೆಂಟ್: ಈ ಕೋರ್ಸ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ವ್ಯವಹಾರ, ಇನ್ವೆಂಟರಿ ಮ್ಯಾನೇಜ್​ಮೆಂಟ್, ಲಾಜಿಸ್ಟಿಕ್ಸ್ ಮತ್ತು ಗ್ರಾಹಕ ಸೇವೆಯ ವಿವಿಧ ಅಂಶಗಳನ್ನು ಪರಿಚಯಿಸುತ್ತದೆ.

UX/UI ವಿನ್ಯಾಸ: ಈ ಕೋರ್ಸ್ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಕೆದಾರ ಸ್ನೇಹಿಯಾಗಿ ಮಾಡುವ ಕಲೆಯನ್ನು ಕಲಿಸುತ್ತದೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS