2025ರ ಏಷ್ಯಾದ 10 ವಿಶ್ವವಿದ್ಯಾಲಯಗಳಿವು; ಭಾರತದ ಒಂದು ಯೂನಿವರ್ಸಿಟಿಗೂ ಸಿಕ್ಕಿಲ್ಲ ಸ್ಥಾನ!
By Prasanna Kumar PN May 19, 2025
Hindustan Times Kannada
ಕ್ಯಾನ್ವಾ ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ವಿಶ್ವವಿದ್ಯಾಲಯ ರ‍್ಯಾಂಕಿಂಗ್ ಬಿಡುಗಡೆ ಮಾಡಿರುವ ಪ್ರಕಾರ 2025ರ ಏಷ್ಯಾದ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಇಂತಿದೆ. ಬೋಧನೆ, ಅಧ್ಯಯನ, ಸಂಶೋಧನೆ ಸೇರಿ ಹಲವು ಅಂಶಗಳನ್ನು ಈ ರ‍್ಯಾಂಕಿಂಗ್ ಆಧರಿಸಿದೆ.
ಸಿಂಘುವಾ ವಿಶ್ವವಿದ್ಯಾಲಯ: ಚೀನಾದಲ್ಲಿರುವ ಸಿಂಘುವಾ ವಿಶ್ವವಿದ್ಯಾಲಯವು ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಉದ್ಯಮಕ್ಕೆ ಸಂಬಂಧಿಸಿ ಪೂರ್ಣ ಅಂಕ ಗಳಿಸುತ್ತದೆ. ಸಂಶೋಧನೆ, ಬೋಧನೆ ಮತ್ತು ಒಟ್ಟಾರೆ ಶೈಕ್ಷಣಿಕ ಗುಣಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಚೀನಾದ ಪೀಕಿಂಗ್ ವಿಶ್ವವಿದ್ಯಾಲಯವು 2ನೇ ಸ್ಥಾನ ಪಡೆದುಕೊಂಡಿದೆ. ಇದು ಬೋಧನೆ ಮತ್ತು ಸಂಶೋಧನೆಗೆ ಸಂಬಂಧಿಸಿ ಹೆಚ್ಚಿನ ಅಂಕ ಪಡೆಯುವ ಮೂಲಕ ಗಮನ ಸೆಳೆದಿದೆ. ಉದ್ಯಮ ಮತ್ತು ಜಾಗತಿಕ ಪಾಲುದಾರಿಕೆಗಳೊಂದಿಗೆ ಬಲವಾದ ಸಂಪರ್ಕ ಹೊಂದಿದೆ.
ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ: ಏಷ್ಯಾದಲ್ಲಿ ಮೂರನೇ ಸ್ಥಾನ ಪಡೆದಿರುವ ಈ ವಿಶ್ವವಿದ್ಯಾಲಯವು ಸಂಶೋಧನೆ, ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿ ಮುಂಚೂಣಿಯಲ್ಲಿದೆ. ಇದು ಉದ್ಯಮದ ತೊಡಗಿಸಿಕೊಳ್ಳುವಿಕೆಯಲ್ಲೂ ಪೂರ್ಣ ಅಂಕ ಗಳಿಸುತ್ತದೆ.
ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ: ಇದು ಏಷ್ಯಾದ ನಾಲ್ಕನೇ ಶ್ರೇಯಾಂಕ ಹೊಂದಿರುವ ಯೂನಿವರ್ಸಿಟಿ. ಸಂಶೋಧನೆ ಮತ್ತು ಜಾಗತಿಕ ಸಂಬಂಧಗಳಿಗೆ ಹೆಸರುವಾಸಿಯಾಗಿದ್ದು, ಇದು ಉದ್ಯಮ ಸಂಪರ್ಕಗಳು ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿಯೂ ಉನ್ನತ ಅಂಕ ಹೊಂದಿದೆ.
ಟೊಕಿಯೊ ವಿಶ್ವವಿದ್ಯಾಲಯ: ಜಪಾನ್ನ ಟೊಕಿಯೊ ವಿಶ್ವವಿದ್ಯಾಲಯವು ಐದನೇ ಸ್ಥಾನದಲ್ಲಿದೆ. ಇದು ಬೋಧನೆ ಮತ್ತು ಸಂಶೋಧನಾ ಪರಿಸರದಲ್ಲಿ ಶ್ರೇಷ್ಠತೆಗೆ ಹೆಸರುವಾಸಿ. ಮತ್ತು ಉದ್ಯಮ ಸಹಯೋಗದಲ್ಲೂ ಅಗ್ರಸ್ಥಾನದಲ್ಲಿದೆ.
ಹಾಂಗ್ ಕಾಂಗ್ ಯೂನಿವರ್ಸಿಟಿ: ಆರನೇ ಸ್ಥಾನದಲ್ಲಿರುವ ಹಾಂಗ್ ಕಾಂಗ್ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಗುಣಮಟ್ಟ ಮತ್ತು ಅಂತಾರಾಷ್ಟ್ರೀಯ ಉಪಸ್ಥಿತಿಗೆ ಎದ್ದು ಕಾಣುತ್ತದೆ. ಇದು ಬೋಧನೆ ಮತ್ತು ಉದ್ಯಮದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಪುಡಾನ್ ವಿಶ್ವವಿದ್ಯಾಲಯ: ಚೀನಾದ ಫುಡಾನ್ ವಿಶ್ವವಿದ್ಯಾಲಯವು ಏಳನೇ ಸ್ಥಾನದಲ್ಲಿದೆ. ಇದು ಸಂಶೋಧನೆ, ಕೈಗಾರಿಕಾ ಸಂಪರ್ಕಗಳು ಮತ್ತು ಸಮತೋಲಿತ ಶೈಕ್ಷಣಿಕ ವಾತಾವರಣಕ್ಕೆ ಪ್ರಸಿದ್ಧಿ.
ಝೆಜಿಯಾಂಗ್ ವಿಶ್ವವಿದ್ಯಾಲಯ: ಚೀನಾದವರೇ ಆದ ಝೆಜಿಯಾಂಗ್ ವಿಶ್ವವಿದ್ಯಾಲಯವು 8ನೇ ಸ್ಥಾನದಲ್ಲಿದೆ. ಇದು ಉದ್ಯಮದಲ್ಲಿ ಪೂರ್ಣ ಅಂಕ ಗಳಿಸುತ್ತದೆ. ಬೋಧನೆ ಮತ್ತು ಸಂಶೋಧನೆಯಲ್ಲಿ ಸ್ಥಿರವಾದ ಕಾರ್ಯಕ್ಷಮತೆ ತೋರಿಸುತ್ತದೆ.
ಹಾಂಗ್ ಕಾಂಗ್‌ನ ಚೀನೀ ವಿಶ್ವವಿದ್ಯಾಲಯ: ಸಿಯುಹೆಚ್ಕೆ ಏಷ್ಯಾದಲ್ಲಿ 9ನೇ ಸ್ಥಾನದಲ್ಲಿದೆ. ಇದು ಹಾಂಗ್ಕಾಂಗ್ನಲ್ಲಿ ನೆಲೆಗೊಂಡಿದೆ. ಉದ್ಯಮ ಉಪಸ್ಥಿತಿ, ಸಂಶೋಧನಾ ಗುಣಮಟ್ಟ, ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿ ಅತ್ಯುತ್ತಮ ಅಂಕ ಹೊಂದಿದೆ.
ಶಾಂಘೈ ವಿಶ್ವವಿದ್ಯಾಲಯ: ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾಲಯವು ಹತ್ತನೇ ಸ್ಥಾನದಲ್ಲಿದೆ. ಚೀನಾದಲ್ಲಿ ನೆಲೆಗೊಂಡಿರುವ ಇದು ಉದ್ಯಮದಲ್ಲಿ ಪೂರ್ಣ ಅಂಕಗಳನ್ನು ಗಳಿಸುತ್ತದೆ. ಬೋಧನೆ, ಸಂಶೋಧನೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.