ಜಿಲ್ಲಾಧಿಕಾರಿ ಆಗಬೇಕು ಅಂದ್ರೆ ಏನು ಓದಬೇಕು?
By Rakshitha Sowmya
Jan 08, 2025
Hindustan Times
Kannada
ಜಿಲ್ಲಾಧಿಕಾರಿ ಆಗಬೇಕು ಅನ್ನೋದು ಬಹಳಷ್ಟು ಜನರ ಕನಸು
ಆದರೆ, ಜಿಲ್ಲಾಧಿಕಾರಿ ಆಗಬೇಕಾದರೆ ಏನು ಓದಿಕೊಂಡಿರಬೇಕು, ಆಯ್ಕೆ ಹೇಗೆ ಎಂಬಿತ್ಯಾದಿ ಮಾಹಿತಿ ಎಲ್ಲರಿಗೂ ತಿಳಿದಿರುವುದಿಲ್ಲ
ಜಿಲ್ಲಾಧಿಕಾರಿ ಆಗಲು ಬರೆಯಬೇಕಾದ ಪರೀಕ್ಷೆಗಳು ಯಾವುವು? ಇಲ್ಲಿದೆ ಮಾಹಿತಿ
ಜಿಲ್ಲಾಧಿಕಾರಿ ಹುದ್ದೆ ಎಂಬುದು ಭಾರತೀಯ ಆಡಳಿತ ಸೇವೆ (ಐಎಎಸ್) ವ್ಯಾಪ್ತಿಯಲ್ಲಿರುವಂಥದ್ದು.
ಐಎಎಸ್ ಅಧಿಕಾರಿ ಆಗಬೇಕಾದರೆ ಯುಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಬೇಕು.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಿಲಿಮ್ಸ್ ಮತ್ತು ಮೇನ್ಸ್ ಎಂಬ ಎರಡು ವರ್ಗ ಇದ್ದು, ಎರಡರಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು.
ಈ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರನ್ನು ಭಾರತೀಯ ಆಡಳಿತ ಸೇವೆಗೆ (ಐಎಎಸ್) ಆಯ್ಕೆ ಮಾಡಲಾಗುತ್ತದೆ.
ಐಎಎಸ್ ಅಧಿಕಾರಿಗಳಾದವರು ಜಿಲ್ಲಾಧಿಕಾರಿಗಳಾಗಿ, ವಿವಿಧ ಸರ್ಕಾರಿ ಕಂಪನಿಗಳ, ಏಜೆನ್ಸಿಗಳ ಮುಖ್ಯಸ್ಥರಾಗಿ ಹೊಣೆಗಾರಿಕೆ ನಿರ್ವಹಿಸುತ್ತಾರೆ.
ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ)ಯನ್ನು ಯುಪಿಎಸ್‌ಸಿ ನಿರ್ವಹಿಸುತ್ತಿದ್ದು, ಅರ್ಹ ಪದವೀಧರರು ಈ ಪರೀಕ್ಷೆ ಬರೆಯಬಹುದು.
ವಿಟಮಿನ್ ಕೆ ಸಮೃದ್ಧವಿರುವ ಆಹಾರಗಳಿವು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ