ಎಲೆಕ್ಟ್ರಿಕ್‌ ರೈಲುಗಳು ಒಂದೇ ತಂತಿಯಿಂದ ವಿದ್ಯುತ್ ಪಡೆಯುವುದೇಕೆ?

By Reshma
Nov 26, 2024

Hindustan Times
Kannada

ರೈಲು ಭಾರತದ ಪ್ರಮುಖ ಸಾರಿಗೆ ಸಾಧನವಾಗಿದೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ 

ರೈಲಿಗೆ ಸಂಬಂಧಿಸಿದ ಹಲವು ಆಸಕ್ತಿದಾಯಕ ವಿಚಾರಗಳಿವೆ 

ಅಂತಹ ವಿಚಾರಗಳಲ್ಲಿ ರೈಲಿನ ತಂತಿಗೆ ಸಂಬಂಧಿಸಿದ ಸಂಗತಿಯು ಒಂದು. ರೈಲು ಕೇವಲ ಒಂದು ಕೇಬಲ್ ಸಹಾಯದಿಂದ ಚಲಿಸುತ್ತದೆ 

ಭಾರತೀಯ ರೈಲ್ವೆ ರೈಲು ಓಡಿಸಲು 2 ಲೋಕೊಮೊಟಿವ್ ಯಂತ್ರಗಳನ್ನು ಬಳಸುತ್ತದೆ. ಒಂದು ಎಲೆಕ್ಟ್ರಿಕ್ ಮತ್ತು ಇನ್ನೊಂದು ಡಿಸೆಲ್ ಎಂಜಿನ್‌ 

ಎಲೆಕ್ಟ್ರಿಕ್ ಲೋಕೊಮೋಟಿವ್ ಸಹಾಯದಿಂದ ಚಲಿಸುವ ರೈಲು ಓವರ್‌ಹೆಡ್‌ ಕೇಬಲ್ ಮೂಲಕ ವಿದ್ಯುತ್ ಅನ್ನು ಪಡೆಯುತ್ತದೆ 

ವಿದ್ಯುತ್ ಪ್ರವಾಹವನ್ನು ಸ್ವೀಕರಿಸಲು ರೈಲಿನ ಮೇಲ್ಬಾಗದಲ್ಲಿ ಪ್ಯಾಂಟೊಗ್ರಾಫ್ ಎಂಬ ಸಾಧನವನ್ನು ಅಳವಡಿಸಲಾಗಿದೆ. ಅದರ ಮೂಲಕ ವಿದ್ಯುತ್ ತಂತಿಯು ಎಂಜಿನ್‌ಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡುತ್ತದೆ 

ಎಲೆಕ್ಟ್ರಿಕ್ ಎಂಜಿನ್‌ನಲ್ಲಿ ವಿದ್ಯುತ್‌ ಮೊದಲು ರೈಲಿನ ಟ್ರಾನ್ಸ್‌ಫಾರ್ಮರ್‌ ಅನ್ನು ತಲುಪುತ್ತದೆ. ಲೋಕೊ ಪೈಲೆಟ್‌ ನಾಚ್ ಮೂಲಕ ಟ್ರಾನ್ಸ್‌ಫಾರ್ಮರ್ ವೋಲ್ಟೇಜ್‌ ಅನ್ನು ಹೆಚ್ಚು, ಕಡಿಮೆ ಮಾಡುತ್ತದೆ 

ಟ್ರಾನ್ಸ್‌ಫಾರ್ಮರ್‌ನಲ್ಲಿ ಕಾರ್ಯಾಚರಣೆಗೆ ಅಗತ್ಯವಾದ ವೋಲ್ಟೆಜ್‌ ಅನ್ನು ಸ್ಥಾಪಿಸಿದ ನಂತರ ಪರ್ಯಾಯ ಪ್ರವಾಹವನ್ನು ರಿಕ್ಟಿಫೈಯರ್‌ಗೆ ವರ್ಗಾಯಿಸಲಾಗುತ್ತದೆ. ಅಲ್ಲಿಂದ ಇದನ್ನು ನೇರ ಪ್ರವಾಹವಾಗಿ ಪರಿವರ್ತಿಸಲಾಗುತ್ತದೆ 

ಈಗ ಡೈರೆಕ್ಟ್ ಕರೆಂಟ್ ಅನ್ನು ಡಿಸಿ ಆಕ್ಸಿಲಿಯರಿ ಇನ್ವರ್ಟರ್‌ ಸಹಾಯದಿಂದ 3 ಫೇಸ್‌ ಎಸಿ ಆಗಿ ಪರಿವರ್ತಿಸಲಾಗುತ್ತದೆ. ಚಕ್ರಗಳಿಗೆ ಜೋಡಿಸಲಾದ ಎಳೆತ ಮೋಟಾರ್ ಅನ್ನು ನಿಯಂತ್ರಿಸಲು ಈ ಪ್ರವಾಹವನ್ನು ಬಳಸಲಾಗುತ್ತದೆ 

ಲೋಕೊಮೊಟಿವ್‌ನಲ್ಲಿ ಮೋಟಾರ್ ತಿರುಗಲು ಪ್ರಾರಂಭಿಸಿದ ತಕ್ಷಣ ಚಕ್ರಗಳು ಸಹ ಚಲಿಸಲು ಪ್ರಾರಂಭಿಸುತ್ತವೆ. ಈ ರೀತಿಯಾಗಿ ಒಂದೇ ವಿದ್ಯುತ್‌ ತಂತಿಯಿಂದ ಎಲೆಕ್ಟ್ರಿಕ್ ಲೋಕೊಮೋಟಿವ್‌ನಲ್ಲಿ 3 ಫೇಸ್ ಎಸಿ ಪ್ರವಾಹವನ್ನು ರಚಿಸಲಾಗುತ್ತದೆ 

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!