ಕೆಪಿಟಿಸಿಎಲ್‌ನಲ್ಲಿ ಉದ್ಯೋಗಾವಕಾಶ, ನೇಮಕಾತಿಗಾಗಿ ಸಹನಾ ಶಕ್ತಿ ಪರೀಕ್ಷೆ ಎದುರಿಸಿ
By Praveen Chandra B Nov 20, 2024
Hindustan Times Kannada
ಕೆಪಿಟಿಸಿಎಲ್‌ನಲ್ಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನಾಂಕ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಹನಾ ಶಕ್ತಿಗೆ ರೆಡಿಯಾಗಬೇಕು.
ಕೆಪಿಟಿಸಿಎಲ್ ಮತ್ತು, ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಮೆಸ್ಕಾಂ ಕಲಬುರಗಿಯಲ್ಲಿರುವ ಕಿರಿಯ ಪವರ್‌ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಅಸ್ಟೆಸ್ಟೆಂಟ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
ಸಹನಾ ಶಕ್ತಿ ಪರೀಕ್ಷೆಯಲ್ಲಿ ಹಲವು ಸ್ಪರ್ಧೆಗಳು ಇರುತ್ತವೆ. ಅವುಗಳಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವುದು ಈ ಹುದ್ದೆಯ ನೇಮಕಕ್ಕೆ ಕಡ್ಡಾಯವಾದ ಅಂಶ.
ಈ ರೀತಿ ಅರ್ಹತೆ ಪಡೆದವರನ್ನು ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ಜೇಷ್ಠತೆ ಆಧಾರದಲ್ಲಿ ಕರ್ನಾಟಕ ಸರಕಾರದ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುತ್ತದೆ.
ಸಹನಾ ಶಕ್ತಿಯ ವಿವಿಧ ಪರೀಕ್ಷೆಗಳು ಮುಂದಿನಂತೆ ಇವೆ. ವಿದ್ಯುತ್ ಕಂಬ ಹತ್ತುವುದು. ಇದು 8 ಮೀಟರ್ ಎತ್ತರದ ಕಂಬವಾಗಿದೆ. ಇದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
100 ಮೀಟರ್ ಓಟವನ್ನು 14 ಸೆಕೆಂಡಿನಲ್ಲಿ ಕ್ರಮಿಸಬೇಕು. ಸ್ಕಿಪ್ಪಿಂಗ್, ಒಂದು ನಿಮಿಷಕ್ಕೆ 50 ಬಾರಿ ಸ್ಕಿಪ್ಪಿಂಗ್‌ಮಾಡಬೇಕು.
ಹನ್ನೆರಡು ಪೌಂಡ್ ತೂಕದ ಶಾಟ್‌ಪೂಟ್ ಎಸೆತ, ಮೂರು ಅವಕಾಶ ನೀಡಲಾಗುತ್ತದೆ, ಎಂಟು ಮೀಟರ್ ದೂರ ಎಸೆಯಬೇಕು.