ಡೇವಿಡ್ ವಾರ್ನರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

By Prasanna Kumar PN
Mar 15, 2025

Hindustan Times
Kannada

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಎಲ್ಲರಿಗೂ ತಿಳಿದಿದೆ.

ಡೇವಿಡ್ ವಾರ್ನರ್ ಅವರು ನಿತಿನ್ ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ರಾಬಿನ್ ಹುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಿತಿನ್ ಮತ್ತು ಶ್ರೀಲೀಲಾ ಅಭಿನಯದ ರಾಬಿನ್ ಹುಡ್ ಚಿತ್ರ ಈ ತಿಂಗಳ 28 ರಂದು ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಡೇವಿಡ್ ವಾರ್ನರ್ ಅವರ ಫಸ್ಟ್​ ಲುಕ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ವಾರ್ನರ್​ರ ಲುಕ್ ಸ್ಟನ್ನಿಂಗ್ ಆಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ಸಿನಿ ಪ್ರಿಯರು ಲುಕ್ ನೋಡಿ ಫಿದಾ ಆಗಿದ್ದಾರೆ.

ಬೌಂಡರಿಯಿಂದ ಬಾಕ್ಸ್ ಆಫೀಸ್‌ಗೆ ಎಂಬ ಶೀರ್ಷಿಕೆಯೊಂದಿಗೆ ಎಂದು ವಾರ್ನರ್ ಅವರನ್ನ ಚಿತ್ರತಂಡ ಸ್ವಾಗತಿಸಿದೆ.

ವಾರ್ನರ್ ಕೂಡ ಚಿತ್ರದ ಪ್ರಚಾರಗಳಲ್ಲಿ ಭಾಗವಹಿಸಲಿದ್ದಾರೆ ಎಂದು ನಿರ್ದೇಶಕ ವೆಂಕಿ ಕುಡುಮುಲ ಬಹಿರಂಗಪಡಿಸಿದ್ದಾರೆ.

ಉಳಿದೆಲ್ಲಾ ಕ್ರಿಕೆಟಿಗರು ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದರೆ, ವಾರ್ನರ್ ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿದ್ದಾರೆ.

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದಾಗ ವಾರ್ನರ್ ತೆಲುಗು ಜನರಿಗೆ ತುಂಬಾ ಹತ್ತಿರವಾಗಿದ್ದರು.

ಭಾರತದ ಮಾರುಕಟ್ಟೆಗೆ ಈ ವರ್ಷ ಪ್ರವೇಶಿಸಲಿರುವ ಎಲೆಕ್ಟ್ರಿಕ್ ಕಾರುಗಳು