ದೀಪಿಕಾ-ರಣವೀರ್ ಮಗಳಿಗೆ ಹೊಸ ಹೊಸ ಹೆಸರು ಸೂಚಿಸಿದ ಫ್ಯಾನ್ಸ್
By Jayaraj Sep 09, 2024
Hindustan Times Kannada
ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಾಯಿ-ತಂದೆಯಾಗಿದ್ದಾರೆ. ಸೆಪ್ಟೆಂಬರ್ 8ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ರಣವೀರ್ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಭಿಮಾನಿಗಳು ಕೂಡಾ ಖುಷಿಯಾಗಿದ್ದಾರೆ.
ದೀಪಿಕಾ-ರಣ್‌ವೀರ್ ದಂಪತಿಗೆ ಅಭಿನಂದನೆ ಸಲ್ಲಿಸುವ ಜತೆಗೆ ಮಗಳಿಗೆ ಹೊಸಹೊಸ ಹೆಸರನ್ನು ಫ್ಯಾನ್ಸ್ ಸೂಚಿಸುತ್ತಿದ್ದಾರೆ. ಆ ಹೆಸರುಗಳನ್ನು ನೋಡೋಣ.
ರವಿಕಾ: ಅಭಿಮಾನಿಯೊಬ್ಬ ಮಗುವಿಗೆ ರವಿಕಾ ಹೆಸರನ್ನು ಸೂಚಿಸಿದ್ದಾರೆ. ರಣವೀರ್ ಹೆಸರಿನ ‘ಆರ್’ ಮತ್ತು ದೀಪಿಕಾ ಅವರ ‘ಇಕಾ’ ಅಕ್ಷರಗಳನ್ನು ಜೋಡಿಸಿ ಈ ಹಸೆರು ಹೆಣೆದಿದ್ದಾರೆ. ಇದರರ್ಥ ಸೂರ್ಯನ ಕಿರಣಗಳು.
ರಿದ್ಧಿ: ಈ ಹೆಸರಿಗೆ ಗಣೇಶ ಚತುರ್ಥಿಯಂದು ಮಗಳು ಜನಿಸಿದ್ದು ಒಂದು ಕಾರಣವಾದರೆ, ಇಬ್ಬರ ಸ್ಟಾರ್‌ಗಳ ಹೆಸರಿನ ಅಕ್ಷಗಳೂ ರಿದ್ದಿಯಲ್ಲಿ ಬರುತ್ತಿದೆ.
ರಾಮಾ: ಹೆಣ್ಣು ಮಗುವಿಗೆ ರಾಮಾ ಎಂಬ ಹೆಸರನ್ನು ಸೂಚಿಸಿದ್ದಾರೆ. ಈ ಹೆಸರಿನ ಅರ್ಥ ಎಲ್ಲದರಲ್ಲೂ ಪರಿಣಿತ ಹೆಣ್ಣು ಎಂದಾಗಿದೆ.
ರಿದ್ಧಿತಾ: ಹೆಣ್ಣು ಮಗುವಿಗೆ ರಿದ್ಧಿತಾ ಎಂಬ ಹೆಸರನ್ನೂ ಸೂಚಿಸಲಾಗಿದೆ. ಇದರ ಅರ್ಥವು ಗಣೇಶನ ಪತ್ನಿ ರಿದ್ಧಿಗೆ ಸಂಬಂಧಿಸಿದೆ.
ಗನಿಷ್ಕಾ: ದೀಪಿಕಾ-ರಣ್‌ವೀರ್ ಮಗಳಿಗೆ ಗಣಿಷ್ಕಾ ಹೆಸರನ್ನೂ ಸೂಚಿಸಲಾಗಿದೆ. ಇದರ ಅರ್ಥ ಪಾರ್ವತಿ ದೇವಿಗೆ ಸಂಬಂಧಿಸಿದೆ.
ಅವನೀಷಾ: ಅವನೀಷಾ ಹೆಸರಿನ ಅರ್ಥ ಭೂಮಿ ಮತ್ತು ಗಣೇಶನ ಒಂದು ಭಾಗ.
ಅನಿರಾ: ಈ ಹೆಸರಿನ ಅರ್ಥ ಭಕ್ತಿ ಮತ್ತು ಪ್ರೀತಿ ಕೊಡುವುದು.
ಮೈಸೂರು ದಸರಾ ಅಂಬಾರಿ ವೇಳೆ ಕಂಡ ಖುಷಿ ಕ್ಷಣಗಳು
ಚಿತ್ರ : ಮನೋರಂಜನ್ ಸುರೇಶ್