ಅಭಿಮಾನಿಗಳು ನೋಡಬೇಕಾದ ವಿಜಯ್ ಸೇತುಪತಿ ಅಭಿನಯದ 10 ಚಿತ್ರಗಳು
By Rakshitha Sowmya
Dec 20, 2024
Hindustan Times
Kannada
ವಿಡುದಲೈ ಭಾಗ 2 ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗಿದೆ, ಅಭಿಮಾನಿಗಳು ವಿವಿಧ ಒಟಿಟಿ ವೇದಿಕೆಯಲ್ಲಿ ನೋಡಬಹುದಾದ ವಿಜಯ್ ಸೇತುಪತಿ ಅಭಿನಯದ ಸಿನಿಮಾಗಳು ಹೀಗಿವೆ.
ವಿಜಯ್ ಸೇತುಪತಿ ಅಭಿನಯದ ಮಹಾರಾಜ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯವಿದೆ
ಪಿಜ್ಜಾ, ಹಾರರ್ ಸಿನಿಮಾ ಸನ್ ನೆಕ್ಟ್ಸ್‌ನಲ್ಲಿ ನೋಡಬಹುದು, ಈ ಸಿನಿಮಾ 2012ರಲ್ಲಿ ರಿಲೀಸ್ ಆಗಿತ್ತು
2023 ಮಾರ್ಚ್‌ನಲ್ಲಿ ತೆರೆ ಕಂಡಿದ್ದ ವಿಡುದಲೈ ಭಾಗ 1ನ್ನು ಜೀ 5ರಲ್ಲಿ ನೋಡಬಹುದು
2013ರಲ್ಲಿ ತೆರೆ ಕಂಡಿದ್ದ ಸೂಧು ಕಾವುಮ್ ಸಿನಿಮಾ ಜೀ 5ರಲ್ಲಿ ಲಭ್ಯವಿದೆ, ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ಕನ್ನಡತಿ ಸಂಚಿತಾ ಶೆಟ್ಟಿ ನಟಿಸಿದ್ದಾರೆ
ವಿಜಯ್ ಸೇತುಪತಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಸೇತುಪತಿ ಸಿನಿಮಾ 2016ರಲ್ಲಿ ರಿಲೀಸ್ ಆಗಿತ್ತು, ಈ ಸಿನಿಮಾ ಕೂಡಾ ಜೀ 5ರಲ್ಲಿ ವೀಕ್ಷಿಸಲು ಲಭ್ಯವಿದೆ.
ಮರ್ಡರ್ ಮಿಸ್ಟ್ರಿ ಸಿನಿಮಾ ಮೇರಿ ಕ್ರಿಸ್ಮಸ್ ಇದೇ ವರ್ಷ ಜನವರಿಯಲ್ಲಿ ರಿಲೀಸ್ ಆಗಿತ್ತು, ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ
ಮಾಧವನ್, ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವಿಕ್ರಂ ವೇದಾ ಜೀ 5ರಲ್ಲಿ ನೋಡಲು ಲಭ್ಯವಿದೆ
2019 ರಲ್ಲಿ ತೆರೆ ಕಂಡಿದ್ದ ಸೂಪರ್ ಡಿಲಕ್ಸ್ ಸಿನಿಮಾ ಆಹಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ
2022 ಫೆಬ್ರವರಿಯಲ್ಲಿ ರಿಲೀಸ್ ಆಗಿದ್ದ ಕದೈಸಿ ವಿವಸಾಯಿ ಸಿನಿಮಾ ಸೋನಿ ಲಿವ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ
ಕಾಪೈ ರಣಸಿಂಗಮ್ ಸಿನಿಮಾವನ್ನು ಜೀ 5ರಲ್ಲಿ ನೋಡಬಹುದು
ಕುಟುಂಬದೊಂದಿಗೆ ಮನೆಯಲ್ಲೇ ಗಣರಾಜ್ಯೋತ್ಸವ ರಿಸಲು ಐಡಿಯಾಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ