ವಾರ್ಷಿಕ ಪರೀಕ್ಷೆಗೆ ಕೊನೆಯ ಹಂತದ ಸಿದ್ಧತೆ ಹೇಗಿರಬೇಕು, ವಿದ್ಯಾರ್ಥಿಗಳಿಗೆ ಸಲಹೆ
By Reshma Jan 16, 2025
Hindustan Times Kannada
ಟಿಪ್ಪಣಿ ಮಾಡಿಕೊಳ್ಳಿ. ಪಠ್ಯಪುಸ್ತಕ, ಅಧ್ಯಯನ ಮಾರ್ಗದರ್ಶಿಗಳನ್ನು ಕ್ರಮಬದ್ಧವಾಗಿ ಜೋಡಿಸಿ. ವಿಷಯಗಳ ಪ್ರಾಮುಖ್ಯ ಆಧರಿಸಿ ಆದ್ಯತೆ ನೀಡಿ
ಎಲ್ಲಾ ವಿಷಯಗಳನ್ನು ಓದಿ ಮುಗಿಸಲು ಸಾಧ್ಯವಾಗುವಂತಹ ಟೈಮ್ ಟೇಬಲ್ ರಚಿಸಿ. ಯಾವ ವಿಷಯ ಅಥವಾ ಪಾಠ ನಿಮಗೆ ಹೆಚ್ಚು ಕಷ್ಟ ಎನ್ನಿಸುತ್ತದೆ, ಅದಕ್ಕೆ ಹೆಚ್ಚು ಸಮಯ ಮೀಸಲಿಡಿ
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ. ಇದರಿಂದ ಪರೀಕ್ಷಾ ಕ್ರಮ ಹೇಗಿರುತ್ತೆ, ಯಾವ ರೀತಿಯ ಪ್ರಶ್ನೆ ಬರಬಹುದು ಎಂಬುದು ನಿಮಗೆ ಅರಿವಾಗುತ್ತದೆ
ಮುಖ್ಯವಾದ ಪಾಠಗಳು, ಫಾರ್ಮುಲಾಗಳು, ಡಿಫಿನೇಷನ್‌ಗಳ ಬಗ್ಗೆ ಹೆಚ್ಚು ಗಮನ ಕೊಡಿ. ಇವುಗಳನ್ನು ರಿವಿಷನ್ ಮಾಡುವುದು ಮುಖ್ಯವಾಗುತ್ತದೆ
ವಿರಾಮವಿಲ್ಲದೇ ದೀರ್ಘಕಾಲದ ಓದುವುದನ್ನು ತಪ್ಪಿಸಿ. ನಿಮ್ಮ ಮನಸ್ಸು ದೇಹವನ್ನು, ರೀಚಾರ್ಜ್ ಮಾಡಲು ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ಸಣ್ಣ ವಿರಾಮ ತೆಗೆದುಕೊಳ್ಳಿ
ಪರೀಕ್ಷೆಯ ದಿನಗಳು ಹತ್ತಿರ ಬರುವಾಗ ಸಮತೋಲಿತ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ. ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆ ನಿದ್ದೆ ಮಾಡಿ. ಆರೋಗ್ಯ ಸ್ಥಿರವಾಗಿರಲು ಜಂಕ್‌ಫುಡ್, ಕೆಫಿನ್ ಅಂಶಗಳಿಂದ ದೂರವಿರಿ
ಪರೀಕ್ಷೆ ದಿನಗಳು ಹತ್ತಿರ ಬಂದಾಗ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಬ್ರೇಕ್ ಹಾಕಿ. ಆ ಸಮಯದಲ್ಲಿ ಹೊಸ ವಿಷಯ ಕಲಿಯುವುದರಿಂದ ಗೊಂದಲ, ಒತ್ತಡ ಹೆಚ್ಚಾಗಬಹುದು
ಫಾರ್ಮುಲಾಗಳು, ಡಿಫಿನೇಷನ್ ಹಾಗೂ ಕೀ ಪಾಯಿಂಟ್ಸ್‌ಗಳನ್ನು ಗುರುತು ಹಾಕಿಕೊಳ್ಳಲು ಪ್ಲ್ಯಾಶ್‌ಕಾರ್ಡ್‌ಗಳ ನೆರವು ಪಡೆಯಿರಿ, ಇದು ಪರಿಣಾಮಕಾರಿ ಕಲಿಕೆಗೆ ನೆರವಾಗುತ್ತದೆ
ಪರೀಕ್ಷೆ ದಿನಗಳು ಹತ್ತಿರ ಬಂದಾಗ ಒತ್ತಡ, ಆತಂಕ ಸಹಜ. ಇದರ ನಿವಾರಣೆಗೆ ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ಧ್ಯಾನ ಮಾಡಿ. ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಿ
ಪ್ರವೇಶ ಪತ್ರಿಕೆ, ಪೆನ್ನು, ಪೆನ್ಸಿಲ್, ರಬ್ಬರ್, ಜಾಮಿಟ್ರಿ ಸೇರಿದಂತೆ ಪರೀಕ್ಷೆಗೆ ತೆಗೆದುಕೊಂಡು ಹೋಗಲು ಏನೆಲ್ಲಾ ಬೇಕು ಅದನ್ನ ಹಿಂದಿನ ರಾತ್ರಿ ಬ್ಯಾಗ್‌ನಲ್ಲಿ ಇರಿಸಿಕೊಂಡಿರಿ