ಶುಕ್ರಗ್ರಹ ಎಷ್ಟು ಚಂದ: ಭೂಮಿಯ ಸಹೋದರಿಯ 6 ಫೋಟೋಗಳು

By Praveen Chandra B
Oct 22, 2024

Hindustan Times
Kannada

ಶುಕ್ರಗ್ರಹದ ಗಾತ್ರ ಮತ್ತು ರಚನೆ ಭೂಮಿಯನ್ನು ಹೋಲುವುದರಿಂದ ಇದನ್ನು ಭೂಮಿಯ ಸಹೋದರಿ ಎಂದು ಕರೆಯಲಾಗುತ್ತದೆ

ಶುಕ್ರ - ಇದು ಸೂರ್ಯನಿಗೆ ಎರಡನೇ ಅತಿ ಸಮೀಪದ ಗ್ರಹವಾಗಿದೆ. ಈ ಗ್ರಹವು ಸೂರ್ಯನನ್ನು 224.7 ಭೂಮಿ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. 

ಶುಕ್ರಗ್ರಹವು ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಕಾಯ.

ಇದು ಮುಂಜಾನೆ, ಮುಸ್ಸಂಜೆ ಸಮಯದಲ್ಲಿ ಭೂಮಿಗೆ ಚೆನ್ನಾಗಿ ಕಾಣಿಸುತ್ತದೆ. ಇದಕ್ಕಾಗಿ ಇದನ್ನು ಹಗಲು ನಕ್ಷತ್ರ, ಸಂಜೆ ನಕ್ಷತ್ರ ಎಂದೂ ಕರೆಯುತ್ತಾರೆ.

ಶುಕ್ರಗ್ರಹವು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಈ ಗ್ರಹದಲ್ಲಿ ಇಂಗಾಲ ಆಮ್ಲ ಹೆಚ್ಚು ಇದೆ. ಹೀಗಾಗಿ, ಇಲ್ಲಿ ಜೀವಿಗಳು ಇಲ್ಲ. ಇದರ ಮೇಲ್ಮೈ ಅತೀವ ಶಾಖದಿಂದ ಕೂಡಿದೆ.

ನಾಸಾದ ಪ್ರಕಾರ ಈಗಲೂ ಶುಕ್ರಗ್ರಹದಲ್ಲಿ ಲಾವಾರಸ, ಜ್ವಾಲಾಮುಖಿ ಸ್ಪೋಟಗೊಳ್ಳುತ್ತಿದೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS