ರಶ್ಮಿಕಾಯಿಂದ ಆಲಿಯಾವರೆಗೆ 2024ರ ಸೀರೆ ಟ್ರೆಂಡ್‌ಗೆ ಇವರೇ ಸ್ಫೂರ್ತಿ
By Reshma Dec 28, 2023
Hindustan Times Kannada
ಸೆಲೆಬ್ರಿಟಿಗಳು ಏನೇ ಮಾಡಿದ್ರು ಚೆಂದ ಎಂಬ ಮಾತಿದೆ. ಅದು ಕೆಲವೊಮ್ಮೆ ಪಾಸಿಟಿವ್ ಆದ್ರೂ ಕೆಲವೊಮ್ಮೆ ನೆಗಟಿವ್ ಅರ್ಥ ನೀಡುತ್ತೆ. ಅದೇನೇ ಇರ್ಲಿ, ಸೀರೆಯಲ್ಲಿ ಸಖತ್ ಆಗಿ ಕಾಣಿಸುವ ಬಾಲಿವುಡ್ ಸೆಲೆಬ್ರಿಟಿಗಳಿವರು. ಇವರ ಸಾರಿ ಸ್ಟೈಲ್ 2024ರಲ್ಲಿ ಹೊಸ ಟ್ರೆಂಡ್‌ಗೆ ಮುನ್ನುಡಿ ಬರೆದಿರುವುದು ಸುಳ್ಳಲ್ಲ.
ನಿಯಾನ್ ಸೀರೆ: ಸೋನಾಕ್ಷಿ ಸಿನ್ಹಾ ಧರಿಸಿರುವ ಗಿಳಿ ಹಸಿರು ಬಣ್ಣದ ನಿಯಾನ್ ಸೀರೆ ವೈಬ್ರೆಂಟ್ ಲುಕ್ ನೀಡುವುದರಲ್ಲಿ ಎರಡು ಮಾತಿಲ್ಲ. ಇದು 2024ರಲ್ಲಿ ಪಕ್ಕಾ ಟ್ರೆಂಡಿ ಸೀರೆ ಆಗೋದು ಖಂಡಿತ.
ಟಿಶ್ಯೂ ಸೀರೆ: ಕಾಫಿ ಬಣ್ಣದ ಟಿಶ್ಯೂ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಲುಕ್ ಸ್ಟನ್ನಿಂಗ್ ಆಗಿದೆ. ಇದು ಸರಳವಾಗಿದ್ದು, ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಬಾರ್ಡರ್‌ಲೆಸ್ ಸೀರೆ: ಸೀರೆ ಜಗತ್ತು ದಿನೇ ದಿನೇ ಬದಲಾಗುತ್ತಿದೆ. ಹಿಂದೆಲ್ಲಾ ಬಾರ್ಡರ್ ಸೀರೆ ಖ್ಯಾತಿ ಪಡೆದಿದ್ದರೆ, ಇದೀಗ ಬಾರ್ಡರ್‌ಲೆಸ್ ಸೀರೆ ಟ್ರೆಂಡ್ ಆಗಿದೆ. ಇದಕ್ಕೆ ಅಲಿಯಾ ಉಟ್ಟು ಈ ಸೀರೆಯೇ ಸಾಕ್ಷಿ.
ಬನಾರಸಿ ಸೀರೆ: ಬನಾರಸಿ ಸೀರೆ ಎಂದಿಗೂ ತನ್ನ ವರ್ಚಸ್ಸು ಕಳೆದುಕೊಳ್ಳುವುದಿಲ್ಲ. ಈ ಸೀರೆ ಮಾರು ಹೋಗದವರಿಲ್ಲ. ಸೆಲೆಬ್ರೆಟಿಗಳಿಗೆ ಅಚ್ಚುಮೆಚ್ಚು ಈ ಬನಾರಸಿ ಸೀರೆ. ಫ್ಯಾಷನ್ ಸೀರೆ ಟ್ರೆಂಡ್ 2024ರಲ್ಲೂ ಮುಂದುವರಿಯಲಿದೆ.
ಸೀಕ್ವಿನ್ ಸೀರೆ: 2023ರಲ್ಲಿ ಭಾರಿ ಮೆಚ್ಚುಗೆ ಪಡೆದ ಸೀರೆಯಿದು. ಈ ಸೀರೆಯ ಟ್ರೆಂಡ್ ಹೊಸ ವರ್ಷದಲ್ಲೂ ಮುಂದುವರಿಯಲಿದೆ. ತಮನ್ನಾ ಭಾಟಿಯಾರಿಂದ ಕಾಜೋಲ್‌ವರೆಗೆ ಈ ಸೀರೆಯನ್ನು ಮೆಚ್ಚಿ ಧರಿಸಿದ್ದಾರೆ.
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ